ಕನ್ನಡ ಉಳಿವಿಗೆ ಯುವಕರು ಮುಂದಾಗಲಿ

ಸಿಂಧನೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ ಉದ್ಘಾಟಿಸಿದರು. ಪ್ರಮುಖರಾದ ಇರ್ಫಾನ್ ಕೆ, ಟಿ.ಹುಸೇನಸಾಬ್, ಎಚ್.ಎಫ್.ಮಸ್ಕಿ, ಬಸವರಾಜ ಬಿಳೆಕಲ್ ಅರಳಹಳ್ಳಿ ಇದ್ದರು.
ಸಿಂಧನೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ ಉದ್ಘಾಟಿಸಿದರು. ಪ್ರಮುಖರಾದ ಇರ್ಫಾನ್ ಕೆ, ಟಿ.ಹುಸೇನಸಾಬ್, ಎಚ್.ಎಫ್.ಮಸ್ಕಿ, ಬಸವರಾಜ ಬಿಳೆಕಲ್ ಅರಳಹಳ್ಳಿ ಇದ್ದರು.
Published on

ಸಿಂಧನೂರು: ಪ್ರತಿಯೊಬ್ಬರೂ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.

ನಗರದ ಸನ್‌ರೈಸ್ ಡಿ.ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಕಸಾಪ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ತಾಲೂಕು ಘಟಕ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಉಳಿವಿಗಾಗಿ ಯುವ ಜನತೆ ಮುಂದಾಗಬೇಕು. ಕಳೆದ ಎರಡ್ಮೂರು ವರ್ಷಗಳಿಂದ ಕಸಾಪ ತಾಲೂಕು ಅಧ್ಯಕ್ಷರಾಗಿ ಪಂಪಯ್ಯಸ್ವಾಮಿ ಸಾಲಿಮಠ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕಸಾಪದಿಂದ ಆಜೀವ ಸದಸ್ಯತ್ವ ಪಡೆದವರು 3.25 ಲಕ್ಷ ಸದಸ್ಯರಿದ್ದಾರೆ. ಆದರೆ, ಅಧ್ಯಕ್ಷರಿಗೆ ಆಜೀವ ಸದಸ್ಯತ್ವ ಸಂಖ್ಯೆ ಒಂದು ಕೋಟಿ ತಲುಪಬೇಕು ಎಂಬ ಕನಸಿದೆ. ಸದಸ್ಯತ್ವ ಪಡೆದುಕೊಂಡವರು ಯಾರು ಬೇಕಾದರೂ ತಾಲೂಕು ಅಧ್ಯಕ್ಷ, ಕಾರ್ಯಾಧ್ಯಕ್ಷ, ಕೋಶಾಧ್ಯಕ್ಷ ಸೇರಿ ಅನೇಕ ಹುದ್ದೆಗಳನ್ನು ಹೊಂದಬಹುದು ಎಂದರು.

ಶಿಕ್ಷಕ ಬಸವರಾಜ ಹೊಸಳ್ಳಿ ಅಂಬಾಮಠ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಇರ್ಫಾನ್ ಕೆ, ಜಮಾತೆ ಇಸ್ಲಾಂ ಹಿಂದ್ ಅಧ್ಯಕ್ಷ ಟಿ.ಹುಸೇನಸಾಬ್, ಶಿಕ್ಷಕರಾದ ಎಚ್.ಎಫ್.ಮಸ್ಕಿ, ಬಸವರಾಜ ಬಿಳೇಕಲ್ ಅರಳಹಳ್ಳಿ, ಶ್ರವಣಕುಮಾರ, ಸುರೇಶ ಕಟ್ಟಿಮನಿ, ಎಸ್.ಎನ್.ವೀರೇಶ, ಮೌನೇಶ ದೊರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net