ಗದಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ “ಮನೆಯಂಗಳದಲ್ಲಿ ಸಾಹಿತ್ಯ” ಕಾಯ೯ಕ್ರಮ

img11
Published on

Gadag: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ, ಗದಗ ಮನೆಯಂಗಳದಲ್ಲಿ ಸಾಹಿತ್ಯ ಕಾಯ೯ಕ್ರಮವನ್ನು ಶ್ರೀ ನೀಲಮ್ಮ ಬೇವಿನಮರದ ಇವರ ಮನೆಯಲ್ಲಿ ಹಮ್ಮಿಕೊಂಡಿತ್ತು. ಶ್ರೀ ವೀರಭದ್ರಪ್ಪ ಹಲಕಾಟೆಪ್ಪ ಬೇವಿನಮರದ ಮತ್ತು ಶ್ರೀ ವೀರೇಶ ವೀರಭದ್ರಪ್ಪ ಬೇವಿನಮರದ ಇವರ ನೆನಪಿನಲ್ಲಿ “ಒಲವೇ ನಮ್ಮ ಬದುಕು” ಎನ್ನುವ ಶೀಷಿ9ಕೆಯಡಿ ಕಾಯ9ಕ್ರಮ ಆಯೋಜಿಸಲಾಗಿತ್ತು. ಉದಯವಾಗಲಿ ನಮ್ಮ ಚಲುವ ಕನ್ನಡನಾಡು ಹಾಡಿನೊಂದಿಗೆ ಕಾಯ9ಕ್ರಮ ಪ್ರಾರಂಭವಾಯಿತು. ಕನ್ನಡ ಶಾಲು ಧಾರಣೆಯ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಕಾಯ9ಕ್ರಮವನ್ನು ಹಿರಿಯರಾದ ಶ್ರೀ ಚನ್ನವೀರ ಶಾಸ್ತ್ರಿಗಳು(ಕಡಣಿ) ದೀಪ ಬೆಳಗಿಸುವುದರ ಮೂಲಕ ಕಾಯ9ಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಬದುಕು ಮತ್ತು ಸಾಹಿತ್ಯ ಎರಡೂ ಒಂದೇ ನಾಣ್ಯದ ಮುಖಗಳು, ಬದುಕೇ ಸಾಹಿತ್ಯದ ವಿಷಯ ವಸ್ತುವಾಗಿರುತ್ತದೆ. ಬದುಕಿನ ಸಹಿ-ಕಹಿಗಳನ್ನು ಸಮಭಾವದಲ್ಲಿ ಸ್ವೀಕರಿಸಿದಾಗ ಬದುಕಿನ ಬಗೆಗೆ ಒಲವು ಮೂಡುತ್ತದೆ ಎಂದರು. ಕನ್ನಡದಲ್ಲಿ ಬದುಕಿನ ಬಗೆಗಿನ ಒಲವನ್ನು ನಮ್ಮ ಕವಿಗಳು ಅತ್ಯಂತ ಸಮಥ9ವಾಗಿ ಕಟ್ಟಿಕೊಟ್ಟಿದ್ದಾರೆ. ಬೇಂದ್ರೆ, ಪು.ತಿನ, ಕುವೆಂಪು, ಕೆ.ಎಸ್.ನರಸಿಂಹಸ್ವಾಮಿ, ಅವರ ಕವನಗಳನ್ನು ವಿಶ್ಲೇಷಿಸುತ್ತ ಒಲವೇ ನಮ್ಮ ಬದುಕು ಎಂಬುದನ್ನು ನಿರೂಪಿಸಿದರು.

ಇನ್ನೋವ9 ಮುಖ್ಯ ಅತಿಥಿಗಳಾದ  ಶ್ರೀ ಚಂದ್ರು ತಡಸದ ಅವರು ಮಾತನಾಡಿ ತಮ್ಮ ಪರಿವಾರದವರೇ ಆದ ವೀರಭದ್ರಪ್ಪ ಬೇವಿನಮರದ ಮತ್ತು ವೀರೇಶ ಬೇವಿನಮರದ ಅವರ ಬದುಕಿನ ಕೆಲವು ಅಂಶಗಳನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಟ್ಟರು. ಎರಡು ಅವಧಿಗಳಿಗೆ ನಗರಸಭೆಯ ಅಧ್ಯಕ್ಷರಾಗಿದ್ದ ಶ್ರೀ ರಾಚಪ್ಪ ಬೇವಿನಮರದ ಅವರ ಸೇವೆಯನ್ನು ಸ್ಮರಿಸುತ್ತ, ಆ ಮೂಲ ಬೇರಿನ ಬೇವಿನಮರದ ಕುಟುಂಬ ಜನಪರವಾದ ಕಾಯ9ದಲ್ಲಿ ನಿರತವಾದದ್ದು ಎಂದು ನುಡಿದರು. “ಒಲವೇ ನಮ್ಮ ಬದುಕು” ಎನ್ನುವ ವಿಷಯದ ಕುರಿತು ಹೊಂಬಳದ ಶಿಕ್ಷಕಿಯರಾದ ಶ್ರೀಮತಿ ವಿಜಯಲಕ್ಷ್ಮಿ ಜಂಗಮನಿ ಉಪನ್ಯಾಸ ನೀಡಿದರು. ತಮ್ಮ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುತ್ತ ಸಹಕಾರ ಮನೋಭಾವ, ಹೊಂದಿಕೊಂಡು, ಕೂಡಿಕೊಂಡು ಹೋಗುವ ಮನಸ್ಥಿತಿ ಅಂದಿನ ಜನರಲ್ಲಿ ಹೆಚ್ಚಾಗಿದ್ದ ಕಾರಣ ಕುಟುಂಬಗಳಲ್ಲಿ ಹೆಚ್ಚು ಒತ್ತಡ ಇರುತ್ತಿರಲಿಲ್ಲ. ನಾನು ಎನ್ನುವುದಕ್ಕಿಂತ ನಾವು ಎನ್ನುವ ಭಾವ ಅಂದಿನ ಜನರನ್ನು ಕೌಟುಂಬಿಕವಾಗಿ ಗಟ್ಟಿಯಾಗಿ ನಿಲ್ಲಿಸಿದ್ದವು. ಇಂದು ಅವುಗಳಲ್ಲಿ ಗಟ್ಟಿತನ ಮಾಯವಾಗಿದೆ. ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಮಕ್ಕಳು ಎನ್ನುವ ಕುಬ್ಜ ಮನೋಭಾವ ಎಲ್ಲೆಲ್ಲೂ ಜನಪ್ರಿಯವಾಗುತ್ತಿದೆ ಎಂದು ಹೇಳಿದರು. ಕಾಯ9ಕ್ರಮದಲ್ಲಿ ಬೇವಿನಮರದ ಅವರ ಕುಟುಂಬದ ಹಿರಿಯ ಜೀವಿಗಳಾದ ಶ್ರೀಮತಿ ನೀಲಮ್ಮ ವೀರಭದ್ರಪ್ಪ ಬೇವಿನಮರದ ಅವರು ವೇದಿಕೆಯ ಮೇಲಿದ್ದರು.

ನಮ್ಮೊಲವಿನ ಕವಿಗಳಾಗಿ ಆಗಮಿಸಿದ್ದ ಮಂಜುಳಾ ವೆಂಕಟೇಶಯ್ಯ, ಅನಸೂಯ ಮಿಟ್ಟಿ, ಪ್ರೇಮಾ ಗುಳಗೌಡರ, ಕೆ.ಜೆ.ಹೊನ್ನಾದೇವಿ, ಮಹಾಂತೇಶ ಮಲ್ಲಾರಿ, ಪದ್ಮಾ ಕಬಾಡಿ, ಭಾಗ್ಯಶ್ರೀ ಹುರಕಡ್ಲಿ, ದೀನಬಂಧು ಆದಿ, ರಮಾ ಬಸು, ಜಯಶ್ರೀ ಅಂಗಡಿ, ವೀರೇಶ ಹಲಾ9ಪೂರ ಅವರು ಅಪ್ಪ ಮತ್ತು ಅಣ್ಣ ನ ಕುರಿತು ಸ್ವರಚಿತ ಕವನವನ್ನು ಪ್ರಸ್ತುತಪಡಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಹಿದ್ದ ಹಿರಿಯರಾದ ಶ್ರೀ ಬಸವರಾಜ ಗಣಪ್ಪನವರ ಮಾತನಾಡಿ ಕವಿಗಳ ಕಾವ್ಯವನ್ನು ವಿಮಶಿ9ಸುತ್ತ ಕವಿಯಾದವನು ಹೇಗೆ ವಿಷಯ ವಸ್ತುವನ್ನು ಸಮಾಜದಿಂದ, ಬದುಕಿನಿಂದ ಹೆಕ್ಕಿ ತೆಗೆದುಕೊಳ್ಳಬೇಕು, ಕಾವ್ಯದ ರಚನೆಗಾಗಿ ಕವಿಗಳು ಓದನ್ನು ಅವಲಂಬಿಸುವುದು ಅಗತ್ಯವಾಗಿದೆ ಎಂದರು.

ಮಲಸಮುದ್ರದ ಶಿಕ್ಷಕಿಯರಾದ ಶ್ರೀಮತಿ ಪಾವ9ತಿ ಬೇವಿನಮರದ ಅವರು 10 ಹಿರಿಯ ನಾಗರಿಕರಿಗೆ ಮಂಡ್ಯದ ಸೀರೆ ಮತ್ತು ಸೊಲ್ಲಾಪುರದ ಚಾದರಗಳನ್ನು ನೀಡಿ ಗೌರವಿಸಿದರು. ಬದುಕಿನ ಸಂಜೆಯಲ್ಲಿ ನೊಂದ ಜೀವಗಳು ವೇದಿಕೆಯ ಮೇಲೆ ಪ್ರೀತಿಯಿಂದ ಅವರ ಕೊಡುಗೆಗಳನ್ನು ಸ್ವೀಕರಿಸಿದರು. ಕೊನೆಯಲ್ಲಿ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿಯವರು ಮಾತನಾಡಿ  ಮೌಲ್ಯಗಳನ್ನು ಉಳಿಸಿಕೊಂಡರೆ ಮಾತ್ರ ಮುಂದಿನ ಜನಾಂಗಕ್ಕೆ ಉಳಿಗಾಲ. ಇಲ್ಲದೇ ಹೋದರೆ ನಮ್ಮ ಕಣ್ಣ ಮುಂದೆಯೇ ನಮ್ಮ ಮುಂದಿನ ಪೀಳಿಗೆ ಸಂಸ್ಕೃತಿ- ಸಂಸ್ಕಾರಗಳಿಂದ ವಂಚಿತರಾಗುತ್ತಾರೆ. ಒಲವೇ ನಮ್ಮ ಬದುಕು, ಬಳಸಿಕೊಂಡೆವದನು ಅದಕು, ಇದಕು ಎದಕು ಎನ್ನುವ ಕವಿವಾಣಿಯಲ್ಲಿ ಅಡಗಿರುವ ಸಾರವನ್ನು ತಿಳಿದುಕೊಳ್ಳಬೇಕಿದೆ ಎಂದರು, ಶ್ರೀಮತಿ ಪಾವ9ತಿ ಬೇವಿನಮರದ ಅವರ ದಾನ-ಧಮ9ದ ಕಾಯ9ವನ್ನು ಸ್ಮರಿಸಿ, ಹಂಚಿಕೊಂಡು ಉಣ್ಣುವ ಭಾವ ಇಂದಿನ ದಿನಗಳಲ್ಲಿ ಮಾಯವಾಗುತ್ತಿದೆ. ಅದಕ್ಕಾಗಿ ನಾವು ಈ ರೀತಿಯ ಕಾಯ9ಕ್ರಗಳ ಮೂಲಕ ಸಾಹಿತ್ಯ ಮತ್ತು ಸಮಾಜ ಎರಡನ್ನೂ ಮೇಳೈಸಲು ಸಾಧ್ಯವಾಗುತ್ತದೆ ಎಂದು ನುಡಿದರು.

ಆರಂಭದಲ್ಲಿ ಪ್ರಾಸ್ತವಾವಿಕವಾಗಿ ಮಾತನಾಡಿದ ಶರಣೆ ರತ್ನಕ್ಕ ಪಾಟೀಲ ಅವರು ತಮ್ಮ ಮತ್ತು ಬೇವಿನಮರದ ಕುಟುಂಬದ ಒಡನಾಟವನ್ನು ನೆನೆದು ಈ ರೀತಿಯ ಕಾಯ9ಕ್ರಮದಗಳ ಮೂಲಕ ಸಮಾಜದಲ್ಲಿ ಸದ್ದಿಲ್ಲದೆ ದುಡಿದವರನ್ನು ಸ್ಮರಿಸಲು ಸಾಧ್ಯವಾಗುತ್ತದೆ. ವೀರಭದ್ರಪ್ಪನವರ ಕುಟುಂಬ ಪ್ರೇಮ ಮತ್ತು ಮಾನವೀಯ ಮೌಲ್ಯಗಳು ಮತ್ತು ವೀರೇಶ ಅವರ ಸಹಕಾರ, ಸಹಾಯ ಭಾವ ನಮಗೆ ಮಾದರಿಯಾಗಿದೆ ಎಂದರು.  ತಾಲೂಕ ಕ.ಸಾ.ಪ ಕಾಯ೯ದಶಿ೯ಗಳಾದ ಶ್ರೀ ವಿಶ್ವನಾಥ ಬೇಂದ್ರೆಯವರು ಅಚ್ಚುಕಟ್ಟಾಗಿ ಕಾಯ೯ಕ್ರಮ ನಿರೂಪಣೆ ಮಾಡಿದರು. ಮತ್ತೋವ9 ಕಾಯ9ದಶಿ9ಗಳಾದ ಪ್ರೊ. ಡಿ.ಎಸ್. ನಾಯಕ ನಿವ9ಹಣೆ ಮಾಡಿದರು. ಸಹ ಕಾಯ9ದಶಿ9ಗಳಾದ ಶ್ರೀಮತಿ ಜ್ಯೋತಿ ಹೇರಲಗಿ ಸ್ವಾಗತವನ್ನು ಮಾಡಿದರು. ಶ್ರೀ ತೋಂಟೇಶ ಬೇವಿನಮರದ ವಂದನಾಪ೯ಣೆ ಗೈದರು.

        ಕಾಯ೯ಕ್ರಮದಲ್ಲಿ ರಾಜೇಶ್ವರಿ ಬೇವಿನಮರದ, ಶಾರದಾ ತಡಸದ, ಶಾಂತಾ ಗಣಪ್ಪನವರ, ಪವಿತ್ರಾ ಕವಳಿಕಾಯಿ, ಮುನವ್ವಾ ಬೇವಿನಮರದ, ಏಖಮ್ಮ ಯಮನೂರ, ನಿಮ೯ಲಾ ಸಿದ್ಧನಗೌಡ್ರ, ಕಮಲಮ್ಮ ಜಂಗಮನಿ, ಅನಸಮ್ಮ ಡಂಬಳ, ಕಲ್ಲಮ್ಮ ಯಲಿಗಾರ, ರತ್ನವ್ವ ಭಜಂತ್ರಿ, ರಾಜೇಶ್ವರಿ ಜಂಗಮನಿ, ಸುಮಂಗಲಾ ಎಚ್ಚಲಗಾರ, ಉಮಾ ತಡಸದ, ಶಿವಲೀಲಾ ತಡಸದ, ವಿಜೇತಾ ಜಂಗಣ್ಣವರ, ಜಯರಾಜ ಜಂಗಣ್ಣವರ, ಸುರೇಶ ಬಳಗಾರ, ಶಿವಮ್ಮ ಬಳಿಗಾರ, ಪ್ರಣವಮಹಾಂತ ಬಳಿಗಾರ, ಸೀನಪ್ಪ, ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net