ಕನ್ನಡಪರ ಸಂಘ-ಸಂಸ್ಥೆಗಳಿಂದಲೇ ಕನ್ನಡಕ್ಕೆ ನೆಲೆ

Sudhee_15_Anupama_Niranjana_&_KV_Ramakrishne_Gowda_Award_@_BM_Sri_Kala_Bhavan (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕನ್ನಡಪರ ಸಂ&ಸಂಸ್ಥೆಗಳು ಇರುವುದರಿಂದಲೇ ಇಂದಿಗೂ ಕನ್ನಡ ನೆಲೆ ನಿಂತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ. ಕನ್ನಡ ಸಂಘರ್ಷ ಸಮಿತಿ ವತಿಯಿಂದ ನಗರದ ಬಿಎಂಶ್ರೀ ಕಲಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಅನುಪಮಾ ನಿರಂಜನ ಮತ್ತು ಡಾ.ಕೋ.ವೆಂ. ರಾಮಕೃಷ್ಟೇಗೌಡರ ಹುಟ್ಟುಹಬ್ಬ, ಪ್ರಶಸ್ತಿ ಪ್ರದಾನ ಹಾಗೂ ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಶಿಕ್ಷಕರೊಬ್ಬರ ಅಮಾನತು ನಡೆಯಿತು. ಕನ್ನಡ ಸಂಟನೆ ಮುಂದೆ ಪರಿಹಾರ ನೀಡುವ ಪ್ರಯತ್ನ ಮಾಡಿದೆ. ನೆಲ&ಜಲ ಭಾಷೆಯ ರಕ್ಷಣೆಗಾಗಿರುವ ಸಂಟನೆಗಳ ಅನಿವಾರ್ಯತೆಯ ಬಗೆಗೆ ಇದೊಂದು ಉದಾಹರಣೆ ಎಂದರು. "ಪದ್ಮಶ್ರೀ' ಪುರಸತೆ, ಕ್ಯಾನ್ಸರ್​ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಮಾತನಾಡಿ, ಡಾ.ಅನುಪಮಾ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತಸದ ಸಂಗತಿ. ಅವರು ಆ ಕಾಲದಲ್ಲಿ ಕ್ಯಾನ್ಸರ್​ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನ ಪಟ್ಟಿದ್ದರು ಎಂದರು. ಡಾ.ಅನುಪಮಾ ನಿರಂಜನ ಪ್ರಶಸ್ತಿಯನ್ನು ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ, ಡಾ.ಕೋವೆಂರಾ ಕನ್ನಡ ಪರಿಚಾರಕ ಪ್ರಶಸ್ತಿಯನ್ನು ಕೆ.ಸುರೇಶ್​ ಅವರಿಗೆ ಪ್ರದಾನ ಮಾಡಲಾಯಿತು. ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಪತ್ರಕರ್ತ ರಾಮಣ್ಣ ಎಚ್​. ಕೋಡಿಹೊಸಹಳ್ಳಿ, ವಿಮರ್ಶಕ ಎಚ್​. ದಂಡಪ್ಪ, ಸಮಿತಿ ಅಧ್ಯಕ್ಷ ಎ.ಎಸ್​. ನಾಗರಾಜಸ್ವಾಮಿ, ಪ್ರಧಾನ ಕಾರ್ಯದರ್ಶಿ ತಾ.ಸಿ. ತಿಮ್ಮಯ್ಯ ಮತ್ತಿತರರಿದ್ದರು.

ಯುವಜನತೆ ಹೆಚ್ಚಾಗಿ ಕ್ರಿಕೆಟ್​ ಹಾಗೂ ಸಿನಿಮಾ ಗುಂಗಿಗೆ ಬಿದ್ದಿದ್ದಾರೆ. ಅದರಿಂದ ಅವರನ್ನು ಹೊರತರುವ ಪ್ರಯತ್ನ ಮುಖ್ಯವಾಗಿ ನಡೆಯಬೇಕಿದೆ. ಈ ಕಾರ್ಯ ಸಾಹಿತ್ಯದಿಂದ ಮಾತ್ರ ಸಾಧ್ಯ. ಕೃತಕ ಬುದ್ಧಿಮತ್ತೆ (ಎಐ) ನಮ್ಮನ್ನು ಆಳುತ್ತಿರುವಾಗ ನಾವು ಹಿಂದೆಂದಿಗಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ. > ಡಾ.ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net