ಕವಿ ಬಿ.ಆರ್. ಲಕ್ಷ್ಮಣರಾವ್‌ಗೆ ‘ಕನ್ನಡ ಸಿರಿ’ ಪ್ರಶಸ್ತಿ

Kannada Siri - 1
Published on

ಬೆಂಗಳೂರು: ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಇಲಾಖಾ ಪಿಂಚಣಿದಾರರ ಸಂಘದ ವತಿಯಿಂದ ನೀಡುವ 2025ನೇ ಸಾಲಿನ ‘ಕನ್ನಡ ಸಿರಿ’ ಪ್ರಶಸ್ತಿಗೆ ಕವಿ ಬಿ.ಆರ್. ಲಕ್ಷ್ಮಣರಾವ್ ಭಾಜನರಾಗಿದ್ದಾರೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣ ಲಕ ಒಳಗೊಂಡಿರುತ್ತದೆ.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಂಘದ ಸದಸ್ಯರಿಗೆ ನೀಡುವ ಪ್ರಸಕ್ತ ಸಾಲಿನ ‘ಪ್ರತಿಭಾಶ್ರೀ’ ಪುರಸ್ಕಾರಕ್ಕೆ ರಂಗಭೂಮಿ ಕ್ಷೇತ್ರದಲ್ಲಿನ ಸೇವೆಗಾಗಿ ಕಲಾವಿದ ಡಾ. ಎಂ.ಎಸ್. ವೆಂಕಟಸುಬ್ಬರಾವ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಕ್ರೀಡಾಪಟು ಎಚ್.ಎಸ್. ಗೋಪಾಲ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5 ಸಾವಿರ ರೂ. ಗೌರವಧನ ಹಾಗೂ ಸ್ಮರಣ ಲಕ ಹೊಂದಿರುತ್ತದೆ.

ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ನ.1ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸಂಘದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ. ಶ್ರೀನಿವಾಸ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net