ಕಸಾಪ ಮಾಧ್ಯಮ ಸಮನ್ವಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

Kasapa
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ)ವತಿಯಿಂದ ಮಂಡ್ಯದಲ್ಲಿ ಡಿಸೆಂಬರ್ 20 ರಿಂದ 22ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಪರಿಷತ್ತಿನ ಬೆಂಗಳೂರು ಕೇಂದ್ರ ಕಚೇರಿಗೆ ಮಾಧ್ಯಮ ಸಮನ್ವಾಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಮುದ್ರಣ ಅಥವಾ ದೃಶ್ಯ ಮಾಧ್ಯಮದಲ್ಲಿ ಅನುಭವ ಹೊಂದಿದ್ದು ಮಾಧ್ಯಮ ಸಂವಹನದ ಅಗತ್ಯಗಳನ್ನು ಅರಿತಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾರ್ವಜನಿಕರ ನಡುವೆ ಸಂವಹನ ಸೇತುವೆಯಾಗುವ ಸಾಮರ್ಥ್ಯವನ್ನು ಹೊಂದಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪವನ್ನು ಅರಿತಿರಬೇಕು.

ಈ ಉದ್ಯೋಗವು ತಾತ್ಕಾಲಿಕವಾಗಿದ್ದು, ಗೌರವ ಧನವನ್ನು ನೀಡಲಾಗುವುದು. ಅರ್ಜಿದಾರರು ಬೆಂಗಳೂರು ನಿವಾಸಿಯಾಗಿದ್ದು, ಪರಿಷತ್ತು ಕಚೇರಿಯಲ್ಲಿ ಅರ್ಜಿ ಜು. 31ರೊಳಗೆ ಅರ್ಜಿ ಪಡೆದು ಆಗಸ್ಟ್ 10ರೊಳಗೆ ಖುದ್ದು ಸಲ್ಲಿಸಬೇಕು. ವಿಳಾಸ: ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net