ಡಿಸೆಂಬರ್‌ 27, 28 ರಂದು ಹೊನ್ನಾವರದಲ್ಲಿ ಉತ್ತರ ಕನ್ನಡ ಜಿಲ್ಲಾ 23 ನೇ ಸಾಹಿತ್ಯ ಸಮ್ಮೇಳನ

Kannada-Sahitya-Sammelana
Published on

ಕಾರವಾರ: ಡಿಸೆಂಬರ್ 27 ಹಾಗೂ 28 ರಂದು ಹೊನ್ನಾವರದ ಮೂಡ ಗಣಪತಿ ದೇವಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲಾ 23 ನೇ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದರು.
ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ, ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಾಹಿತಿ, ಶ್ರೀಪಾದ ಶೆಟ್ಟಿ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಸಮ್ಮೇಳನದಲ್ಲಿ 6 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು ಕನ್ನಡ, ಸಾಹಿತ್ಯ, ಸಂಸ್ಕೃತಿ, ಉತ್ತರ ಕನ್ನಡದ ಕುರಿತು ವಿವಿಧ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.
ಸಮ್ಮೇಳನದ ಪ್ರಧಾನ ವೇದಿಕೆಗೆ ಪದ್ಮಶ್ರೀ ಪುರಸ್ಕೃತ ಯಕ್ಷಗಾನ ಕಲಾವಿದ ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಹೆಸರಿಡಲಾಗಿದೆ. ಸಮ್ಮೇಳನ ನಡೆಯುವ ಸ್ಥಳಕ್ಕೆ ರಾಣಿ ಚೆನ್ನವಬೈರಾದೇವಿ ಆವಾರ ಎಂದು ನಾಮಕರಣ ಮಾಡಲಾಗಿದೆ. ಕೃಷ್ಣಾನಂದ ಕಾಮತ್ ,ಜಿ.ಎಚ್.ನಾಯಕ, ವಿ.ಎಸ್.ಸೋಂದೆ, ಎನ್.ಎಸ್.ಹೆಗಡೆ ಕುಂದರಗಿ ಅವರ ಹೆಸರನ್ನು ವಿವಿಧ ದ್ವಾರಗಳಿಗೆ ಇಡಲಾಗಿದ್ದು, ಅದನ್ನು ದಿನಕರ ಶೆಟ್ಟಿ ಉದ್ಘಾಟಿಸುವರು ಎಂದರು.
ಬೆಳಗ್ಗೆ 8.30 ಕ್ಕೆ ರಾಷ್ಟ್ರಧ್ವಜ ,ನಾಡ ಹಾಗೂ ಪರಿಷತ್ ಧ್ವಜಾರೋಹಣದೊಂದಿಗೆ ಸಮ್ಮೇಳನ ಪ್ರಾರಂಭವಾಗಲಿದೆ. 9 ಗಂಟೆಗೆ ಜಾನಪದ ಕಲಾ ತಂಡಗಳ ಜತೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 10.30 ಕ್ಕೆ ಸಮ್ಮೇಳನವನ್ನು ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಉದ್ಘಾಟನೆ ಮಾಡುವರು. ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪುರಸ್ತಕಗನ್ನು ಬಿಡುಗಡೆ ಮಾಡುವರು ಎಂದು ತಿಳಿಸಿದರು.
2.30 ಕ್ಕೆ ಮೊದಲ ಗೋಷ್ಠಿಯು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿ, ವಿಕಾಸ ಮತ್ತು ರಾಜನೀತಿ ಎಂಬ ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಕುಮಟಾದ ರಾಜೀವ ಗಾಂವಕರ್ ಅಧ್ಯಕ್ಷತೆ ವಹಿಸುವರು. 5.30ಕ್ಕೆ ಸಿಂಧುಚAದ್ರ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಕವಿ, ಕಾವ್ಯ ಸಮಯ ವಿಷಯದ ಕುರಿತು ಗೋಷ್ಠಿ ನಡೆಯಲಿದೆ. ಪತ್ರಕರ್ತ ಜಿ.ಯು.ಭಟ್ ಅಧ್ಯಕ್ಷತೆ ವಹಿಸುವರು.
ಸಾಯಂಕಾಲ 6 ಗಂಟೆಯಿAದ ಶಿಕ್ಷಕ ಕಲಾವಿದರಿಂದ ಯಕ್ಷಗಾನ, ಡಾ.ಅಪ್ಪೆಗೆರೆ ತಿಮ್ಮರಾಜು ಅವರಿಂದ ಜಾನಪದ ಗೀತ ಗಾಯನ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಡಿ.28 ರಂದು ಬೆಳಗ್ಗೆ 9.30 ರಿಂದ ಚುಟುಕು-ಮುಕ್ತಕ-ಗಮಕ ಕುರಿತು ವನರಾಗ ಶರ್ಮ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ, 11 ಗಂಟೆಯಿಂದ ಶತಮಾನೋತ್ಸವ ಸ್ಮರಣೆಯಲ್ಲಿ ಜಿಲ್ಲೆಯ ಮಹನೀಯರು ಎಂಬ ವಿಷಯದ ಕುರಿತು ಮೊದಲ ಗೋಷ್ಠಿ, ಮಧ್ಯಾಹ್ನ 2. ಗಂಟೆಗೆ ಕನ್ನಡ-ಕನ್ನಡಿಗ-ಕರ್ನಾಟಕ ವಿಷಯದ ಕುರಿತು ಡಾ.ಎಂ.ಜಿ.ಹೆಗಡೆ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಯಲಿದೆ. 3.30 ಕ್ಕೆ ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ ಸಂವಾದ ಕಾರ್ಯಕ್ರಮ ನಡೆಯಲಿದೆ. ನಂತರ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. 6.30 ಕ್ಕೆ ಸಮಾರೋ ಸಮಾರಂಭ ನಡೆಯಲಿದ್ದು, ಡಾ.ಜಗದೀಶ ಕೊಪ್ಪ ಸಮಾರೋಪ ಭಾಷಣ ಮಾಡುವರು. ಸಮ್ಮೇಳನದ ಗೋಷ್ಠಿಗಳಲ್ಲಿ ಹೊಸಬರಿಗೆ, ಯುವಕರಿಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡಿಸ್, ಹೊನ್ನಾವರ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ, ಪದಾಽಕಾರಿಗಳಾದ ಮಹೇಶ ಗೂಳಿಕಟ್ಟಿ, ಖೈರುನ್ನಿಸ್ಸಾ ಶೇಖ್, ಬಾಬು ಶೇಖ್ , ಟಿ.ಬಿ.ಹರಿಕಾಂತ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net