

ಬೆಂಗಳೂರು: ಮಂಡ್ಯದಲ್ಲಿ ನಡೆಯಬೇಕಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಾಂಕ ನಿಗದಿಪಡಿಸಲು ಶೀಘ್ರವೇ ಸಂಬಂಧಪಟ್ಟವರ ಸಭೆ ಕರೆಯುವಂತೆ ಕೋರಿ ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಈ ಮೊದಲು ಜೂ. 7,8 ಮತ್ತು 9ರಂದು ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಿ, ಸಿದ್ಧತಾಕಾರ್ಯವೂ ನಡೆದಿತ್ತು. ಅಷ್ಟರಲ್ಲಿ ಮಂಡ್ಯ ಜಿಲ್ಲೆಯ ಏಳೂ ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಲಾಯಿತು. ಅದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ದಿನಾಂಕ ೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಸಮ್ಮೇಳನ ಮುಂದೂಡಲು ನಿರ್ಧರಿಸಲಾಯಿತು.
ಈಗ ಚುನಾವಣೆ ಮುಗಿದು, ಲಿತಾಂಶ ಪ್ರಕಟವಾಗಿ ಕೇಂದ್ರದಲ್ಲಿ ಸರ್ಕಾರವೂ ರಚನೆಯಾಯಿತು. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಭೆ ನಡೆಸಿ ಸಮ್ಮೇಳನದ ದಿನಾಂಕ ನಿಗದಿ ಪಡಿಸಬೇಕು. ಈ ಬಾರಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಾ, ಯೂರೋಪ್ ಸೇರಿ ವಿದೇಶಗಳಲ್ಲಿರುವ ಕನ್ನಡಿಗರೆಲ್ಲರೂ ಉತ್ಸುಕರಾಗಿದ್ದಾರೆ. ಹಾಗಾಗಿ ಡಿಸೆಂಬರ್ 21,22 ಮತ್ತು 23ರಂದು ದಿನಾಂಕ ನಿಗಿದಯಾದರೆ ಎಲ್ಲರೂ ಪಾಲ್ಗೊಳ್ಳಲು ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.