ಕಸಾಪದಿಂದ ಪರೀಕ್ಷೆ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kasapa
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2023-24ನೆಯ ಸಾಲಿನ ‘ಕನ್ನಡ ಪ್ರವೇಶ’,‘ಕಾವ’, ‘ಜಾಣ’ ಹಾಗೂ ‘ರತ್ನ’ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಅ. 31ರವರೆಗೆ ವಿಸ್ತರಿಸಲಾಗಿದೆ.

ಅವಧಿ ವಿಸ್ತರಣೆ ವೇಳೆ ದಂಡ ಶುಲ್ಕ 50 ರೂ. ಹೆಚ್ಚುವರಿಯಾಗಿ ಪಾವತಿಸಿ ಅರ್ಜಿ ಸಲ್ಲಿಸಬೇಕಿದೆ. 25 ರೂ. ಪಾವತಿಸಿ ಪರೀಕ್ಷಾ ನಿಯಮಾವಳಿ ಹಾಗೂ ಅರ್ಜಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಇರುವ ಮಾರಾಟ ಮಳಿಗೆಯಲ್ಲಿ ಪಡೆಯಬಹುದಾಗಿದೆ. ಇಲ್ಲವೆ ಪರಿಷತ್ತು ವಿಳಾಸಕ್ಕೆ 30 ರೂ. ಮನಿಯಾರ್ಡರ್ ಮಾಡಿದರೆ ಮನೆ ವಿಳಾಸಕ್ಕೆ ಅರ್ಜಿ ತಲುಪಲಿದೆ. ಇದಲ್ಲದೆ ಪರಿಷತ್ತಿನ ಜಾಲತಾಣ ಡಿಡಿಡಿ..ಜ್ಞಿ ಮೂಲಕ ಸಹ ಪಡೆದು ಕೊಳ್ಳಬಹುದು. ಅಂತಹವರು ಪರೀಕ್ಷಾ ಶುಲ್ಕದೊಂದಿಗೆ ಹೆಚ್ಚುವರಿ 25 ರೂ. ಪಾವತಿಸಬೇಕು.

ವಿವರಗಳಿಗೆ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು- 560018, ದೂರವಾಣಿ ಸಂಖ್ಯೆ : 080-26612991, 22423867, 26623584 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net