ಕಸಾಪ ದತ್ತಿ ಪ್ರಶಸ್ತಿಗೆ ಎಂ.ಕೃಷ್ಣ ಆಯ್ಕೆ

Kasapa Award
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ 2025ನೇ ಸಾಲಿನ ಎಂ.ಎಲ್. ಮಾದಯ್ಯ ದತ್ತಿ ಪ್ರಶಸ್ತಿಗೆ ಕೋಲಾರದ ಸಿವಿಲ್ ಇಂಜಿನಿಯರ್ ಎಂ.ಕೃಷ್ಣ ಆಯ್ಕೆ ಯಾಗಿದ್ದಾರೆ.

ದತ್ತಿ ದಾನಿಗಳಾದ ಎಂ.ಎಲ್. ಮಾದಯ್ಯ ಅವರ ಆಶಯದಂತೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುವುದು. ಅದರಂತೆ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಯಂತರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಕೃಷ್ಣ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ 145 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿ ಮಾಡುವ ಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇದ್ಕಕಾಗಿ ಇವರು ರಾಜ್ಯ ಸರ್ಕಾರಿಂದ, ಕೇಂದ್ರ ಹಣಕಾಸು ಸಚಿವರಿಂದ ಹಾಗೂ ವಿಶ್ವಸಂಸ್ಥೆಯ ತಾಂತ್ರಿಕ ತಂಡದಿಂದ ಪ್ರಶಂಸೆ ಪಡೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜೂ. 3ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net