ಕಸಾಪ ಆಡಳಿತ ಪಾರದರ್ಶಕ - ಮಹೇಶ ಜೋಶಿ ಸ್ಪಷ್ಟನೆ

Kasapa
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಆಡಳಿತ ಪಾರದರ್ಶಕವಾಗಿದ್ದು, ದಾಖಲೆಗಳು ನಿಖರವಾಗಿವೆ. ಹಾಗಾಗಿ ಯಾವುದೇ ರೀತಿಯ ತನಿಖೆಗೆ ನಾನು ಸಿದ್ದ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. ಹೈಕೋರ್ಟ್ ಆದೇಶದಂತೆ ಅ.5ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸಿ, ಅಲ್ಲಿ ಕಾನೂನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರ ವರದಿಯನ್ನು ಅ.14ರಂದು ಹೈಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಅಲ್ಲಿಯವರೆಗೆ ಸರ್ಕಾರವು ಕಸಾಪ ಅಧ್ಯಕ್ಷರ ವಿರುದ್ಧ ಕ್ರಮ ತೆಗೆದುಕೊಳ್ಳದೆ, ತನ್ನ ನಿಲುವನ್ನು ವರದಿಯ ಮೂಲಕ ತಿಳಿಸಬೇಕೆಂದು ಕೋರ್ಟ್ ನಿರ್ದೇಶಿಸಿದೆ. ಆದರೆ ಈ ನಡುವೆ ಕಸಾಪ ವಿರುದ್ಧ ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ ಎಂದು ಹೇಳಿದ್ದಾರೆ. ಪರಿಷತ್ತಿನ ದಾಖಲೆಗಳು ನಿಖರವಾಗಿರುವುದರಿಂದ ತನಿಖೆಗಳ ಮೂಲಕ ಕಸಾಪ ನಿಲುವು ಇನ್ನಷ್ಟು ಸ್ಪಷ್ಟವಾಗಲಿದ್ದು. ಕಳಂಕರಹಿತವಾಗಿ ಹೊರಬರಲು ಇದೊಂದು ಸದಾವಕಾಶವೆಂದು ಭಾವಿಸಿ ಮುನ್ನಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net