ಕನ್ನಡ ರಥೋತ್ಸವ ಸರ್ವಜನರ ಕಾರ್ಯಕ್ರಮ

kannada
ಕುಂದಾಪುರದ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕನ್ನಡ ರಥೋತ್ಸವದ ಸಮಾಲೋಚನೆ ಸಭೆಯಲ್ಲಿ ಕಿಶೋರ್‌ಕುಮಾರ್ ಮಾತನಾಡಿದರು
Published on

ಕುಂದಾಪುರ: ಇಲ್ಲಿನ ನಗರದಲ್ಲಿ ಅ.31ರಂದು ಕನ್ನಡ ರಥೋತ್ಸವ ಸರ್ವಜನರ ಉತ್ಸವವಾಗಿ ಆಚರಿಸಲ್ಪಡಲಿದೆ. ಧರ್ಮ, ಭಾಷೆಗಳ ತಾರತಮ್ಯವಿಲ್ಲದಿರುವುದರಿಂದ ಎಲ್ಲ ಸಮುದಾಯ, ಸಂಘಗಳು ಕೈಜೋಡಿಸುತ್ತಿದ್ದಾರೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಅಧ್ಯಕ್ಷ ಕಿಶೋರ್‌ಕುಮಾರ್ ಬಿ. ಹೇಳಿದರು.

ಕುಂದಾಪುರದ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸೋಮವಾರ ಕನ್ನಡ ರಥೋತ್ಸವದ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲಾಧಿಕಾರಿ ರಥಕ್ಕೆ ಚಾಲನೆ ನೀಡಲಿದ್ದು, ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಹಾರೈಸಲಿದ್ದಾರೆ. ನ.1ರಿಂದ 7ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ ಮೆರವಣಿಗೆಯ ವಿವರ ನೀಡಿದರು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕೌಶಿಕ್ ಯಡಿಯಾಳ್ ವಂದಿಸಿದರು. ರಾಮಚಂದ್ರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net