ಕಲಬುರಗಿ ಜಿಲ್ಲಾದ್ಯಂತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ : ಕೇAದ್ರದ ವಿರುದ್ಧ ಚಳವಳಿ ನಡೆಯಲಿ ಎಂದ ಖರ್ಗೆ

IMG-20241102-WA0062
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಕೇಂದ್ರ ಸರ್ಕಾರ ಲೋಕಸಭೆ ಸದಸ್ಯ ಸ್ಥಾನಗಳನ್ನು ಜನಸಂಖ್ಯೆ ಆಧರಿಸಿ ವಿಂಗಡಣೆಗೆ ಮುಂದಾಗಿದ್ದರಿAದ ದಕ್ಷಿಣ ರಾಜ್ಯಗಳ ಸಂಸದ ಸ್ಥಾನ ಕಡಿತವಾಗಲಿದೆ. ಇದರ ವಿರುದ್ಧ ಪುನಃ ಚಳವಳಿ ನಡೆಸುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗಂಜ್‌ನ ನಗರೇಶ್ವರ ಶಾಲೆಯಲ್ಲಿ ಜಿ¯್ಲÁಡಳಿತ ಶುಕ್ರವಾರ ಆಯೋಜಿಸಿದ್ದ ೬೯ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿದ ಅವರು, ಜನಸಂಖ್ಯೆ ಆಧಾರಿತ ಮರು ವಿಂಗಡಣೆಯಿAದ ಸಂಸದರ ಸ್ಥಾನ ೫೪೩ರಿಂದ ೮೪೬ಕ್ಕೆ ಹೆಚ್ಚಲಿದೆ. ಉತ್ತರ ಭಾರತದಲ್ಲಿ ೨೯೪ ಸೀಟ್ ಹೆಚ್ಚಿದರೆ, ದಕ್ಷಿಣದಲ್ಲಿ ಕೇವಲ ೨೩ ಅಧಿಕವಾಗಲಿದೆ. ಇದರಿಂದ ನಾಡಿನ ಧ್ವನಿ ದೆಹಲಿಗೆ ತಲುಪಿಸಲು ಕಷ್ಟಕರವಾಗಲಿದ್ದು, ಈ ಅನಾಹುತ ತಪ್ಪಿಸಬೇಕಿದೆ ಎಂದರು.

ಆAಧ್ರ ಪ್ರದೇಶದ ಸಂಸದ ಸ್ಥಾನ ೨೫ರಿಂದ ೨೦, ತಮಿಳುನಾಡಿನಲ್ಲಿ ೩೯ರಿಂದ ೩೦, ಕರ್ನಾಟಕ ೨೮ರಿಂದ ೨೪, ತೆಲಂಗಾಣದಲ್ಲಿ ೧೭ರಿಂದ ೧೫ಕ್ಕೆ ಕುಸಿಯಲಿವೆ. ಉತ್ತರ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರಿಂದ ಸದಸ್ಯರ ಸಂಖ್ಯೆಯೂ ಹೆಚ್ಚಲಿದೆ. ಇದರಿಂದ ಪ್ರಗತಿಯಲ್ಲಿರುವ ನಮ್ಮ ರಾಜ್ಯಕ್ಕೆ ಅನ್ಯಾಯವಾಗಲಿದೆ. ಈ ಬಗ್ಗೆ ಹಳ್ಳಿಯಿಂದ ದಿಲ್ಲಿವರೆಗೆ ಕೂಗು ಏಳಬೇಕಿದೆ ಎಂದು ಹೇಳಿದರು.

ಜಿಎಸ್‌ಟಿ ಸಂಗ್ರಹದಲ್ಲಿ ದ್ವಿತೀಯ, ಎಫ್‌ಡಿಐನಲ್ಲಿ ಶೇ.೩೨ ಹೂಡಿಕೆ, ಐಟಿ ಮತ್ತು ರೇಷ್ಮೆ ರಫ್ತಿನಲ್ಲಿ ನಮ್ಮದು ಬಹುಪಾಲು ಇದ್ದು  ನವೋದ್ಯಮ ಸ್ಥಾಪನೆಯಲ್ಲಿ ೪ನೇ ಸ್ಥಾನವಿದೆ. ೧೧ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯದಿಂದ ೧೦೦ ರೂ. ತೆರಿಗೆ ಕಟ್ಟಿದರೆ ಮರಳಿ ೨೧.೧೦ ರೂ. ಬರುತ್ತಿತ್ತು. ೧೫ನೇ ಹಣಕಾಸು ಆಯೋಗದ ಪ್ರಕಾರ ೧೦೦ ರೂ. ತೆರಿಗೆಗೆ ರಾಜ್ಯಕ್ಕೆ ೧೫.೦೮ ರೂ. ಬರುತ್ತಿದೆ. ಸುಮಾರು ಶೇ.೫.೩ ತೆರಿಗೆ ಕಡಿಮೆಯಾಗಿ ವಾರ್ಷಿಕ ೭೮,೦೦೦ ಕೋಟಿ ರೂ. ವಾಪಸ್ ಬರುತ್ತಿಲ್ಲ. ಕೇಂದ್ರಕ್ಕೆ ಉತ್ತರ ಪ್ರದೇಶ ೧೦೦ ರೂ. ತೆರಿಗೆ ಕಟ್ಟಿದರೆ ೩೩೩ ರೂ., ಮಧ್ಯಪ್ರದೇಶಕ್ಕೆ ೨೯೭ ರೂ.,  ಬಿಹಾರಕ್ಕೆ ೯೨೭, ಒಡಿಶಾಕ್ಕೆ ೧೮೭ ರೂ. ಮರಳಿ ಬರುತ್ತಿದ್ದರೆ, ಕರ್ನಾಟಕ ೧೦೦ ರೂ.ಗೆ ಕೇವಲ ೧೨ ರೂ. ಪಡೆಯುತ್ತಿದೆ. ಈ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.

ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಅಪರ ಡಿಸಿ ರಾಯಪ್ಪ ಹುಣಸಗಿ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪ್ರಮುಖರಾದ ರೇವುನಾಯಕ ಬೆಳಮಗಿ, ಶಿವಾನಂದ ಪಾಟೀಲ್ ಮರತೂರ, ಸಂತೋಷ ಪಾಟೀಲ್ ದಣ್ಣೂರ, ಲಚ್ಚಪ್ಪ ಜಮಾದಾರ, ಮಹಾಂತೇಶ ಸಂಗಾವಿ ಇತರರಿದ್ದರು. ಬಿ.ಎಚ್. ನಿರಗುಡಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net