ಕನ್ನಡ ಕಾರ್ಯಕ್ರಮ ಪಟ್ಟಣಕ್ಕೆ ಸೀಮಿತವಾಗದಿರಲಿ

Published on

ಗುಡಿಬಂಡೆ: ಆಂಧ್ರ ಗಡಿಭಾಗವಾದ ನಮ್ಮ ತಾಲೂಕಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಮಾಡುವ ಕೆಲಸ ಎಲ್ಲ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು ಶಿಕ್ಷಕ ಯು.ರಾಮಾಂಜಿನೇಯ್ಯ ತಿಳಿಸಿದರು.ಪಟ್ಟಣದ ವಿನಾಯಕನಗರದ ಶಿಕ್ಷಕ ಯು.ರಾಮಾಂಜನೆಯ್ಯ ಮನೆಯಲ್ಲಿ ಕಸಾಪದಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ಆಂಧ್ರ ಗಡಿಭಾಗದಲ್ಲಿದ್ದು,ಈ ಭಾಗದಲ್ಲಿ ಕನ್ನಡಪರ ಸಂಟನೆಗಳಿಂದ ಕನ್ನಡದ ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು ಜತೆಗೆ ಶಿಕ್ಷಕರನ್ನು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಕಸಾಪ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್​ ಸುಬ್ಬರಾಯಪ್ಪ ಮಾತನಾಡಿ, ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ಕನ್ನಡ ಭವನಕ್ಕೆ 23ಗುಂಟೆ ಜಮೀನು ಮಂಜೂರು ಮಾಡಿಸಿದ್ದೇವೆ. ಕನ್ನಡ ಭವನ ನಿರ್ಮಾಣಕ್ಕೆ ತಾಲೂಕಿನ ಎಲ್ಲ ಕನ್ನಡ ಪರ ಸಂಗಳ ಸದಸ್ಯರು ಶಾಸಕರ ಬಳಿ ಒತ್ತಾಯ ಮಾಡಬೇಕಿದೆ ಎಂದರು. ಮಾನವ ಮತ್ತೆ ಮಂಗನಾಗಿ ಕವನ ವಾಚನ ಮಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಬಿ.ಮಂಜುನಾಥ ಮಾತನಾಡಿ, ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದೇವೆ.ತಿಂಗಳಿಗೆ ಎರಡು ಮೂರು ಕಾರ್ಯಕ್ರಮಗಳನ್ನು ಮಾಡಲು ಉದ್ದೇಶಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮಗಳ ಯಶಸ್ವಿಗೆ ಕನ್ನಡಾಭಿಮಾನಿಗಳ ಸಹಕಾರ ಬೇಕಿದೆ ಎಂದರು. ಕಸಾಪಯಿಂದ ಶಿಕ್ಷಕ ಯು.ರಾಮಾಂಜಿನೆಯ್ಯ ದಂಪತಿಗೆ ಅಭಿನಂದಿಸಿದರು. 7ನೇ ಕಸಾಪ ಸಮ್ಮೇಳನಾಧ್ಯಕ್ಷ ಅಮೀರ್​ ಜಾನ್​, 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಆರ್​.ವೆಂಕಟಾಚಲಯ್ಯ, ಕನ್ನಡ ಸೇನೆ ಅಧ್ಯಕ್ಷ ಅಂಬರೀಶ್​, ಸಿ.ಆರ್​.ಮಂಜುನಾಥ ಗುಪ್ತ, ಸಿ.ಎಸ್​.ರಾವೇಂದ್ರ, ಗೋವಿಂದಪ್ಪ, ಶಿಕ್ಷಕರಾದ ಶಂಕರ್​, ವಿಜಯ್​ ಕುಮಾರ್​, ಮನೋಹರ್​, ಮಂಜುನಾಥ್​, ಸಮಾಜ ಸೇವಕಿ ಅಂಬಿಕಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net