ಮಹಿಪಾಲರೆಡ್ಡಿ ಸೇರಿ ಐವರಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಪ್ರೊ.ಬಿಕೆಸಿ

IMG-20230915-WA0000
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಬೆಂಗಳೂರಿನ ಗವಿಪುರದ ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಕಲಬುರಗಿಯ ಸಾಹಿತಿ ಲೇಖಕ ಮಹಿಪಾಲರೆಡ್ಡಿ ಮುನ್ನೂರ ಸೇಡಂ, ಗಾಯಕಿ ಶಶಿಕಲಾ, ಕನ್ನಡ ಹೋರಾಟಗಾರ ಜಾವಗಲ್, ರಂಗಕರ್ಮಿ ಬೆಳ್ಳಿಚುಕ್ಕಿ ವೀರೇಂದ್ರ ಅವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಮಾರಂಭ ಉದ್ಘಾಟಿಸಿ ಹಾಗೂ ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಭಾಪತಿ ಮತ್ತು ಮಾಜಿ ಶಿಕ್ಷಣ ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ ಮಾತನಾಡಿ , ಮುಂದಿನ ತಲೆಮಾರಿಗೂ ಸಂಸ್ಕೃತಿಗಳ ಪರಿಚಯ ಮಾಡಿಕೊಡುವಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಕೊಡುಗೆ ಅನನ್ಯವಾಗಿದೆ ಎಂದರು.ಕಳೆದ ೨೭ ವರ್ಷಗಳಿಂದ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಆದರ್ಶ ಅಕಾಡೆಮಿಯದ್ದು ನಿಸ್ವಾರ್ಥ ಸೇವೆ ಎಂದು ಶ್ಲಾಘಿಸಿದರು.

.ಎಂ.ಶ್ರೀ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಭೈರಮಂಗಲ ರಾಮೇಗೌಡ ಮಾತನಾಡಿ, ನಾಡು ನುಡಿ, ಸಂಸ್ಕೃತಿ ಪ್ರಸಾರದಲ್ಲಿ ಆದರ್ಶ ಅಕಾಡೆಮಿ ಮತ್ತು ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರದು ಆದರ್ಶಪ್ರಾಯ ಕೊಡುಗೆ ಎಂದರು.

ಉದಯಭಾನು ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ನರಸಿಂಹ, ಜನಪದ ಹಾಡುಗಾರ ಡಾ.ಅಪ್ಪಗೆರೆ ತಿಮ್ಮರಾಜು ಉಪಸ್ಥಿತರಿದ್ದರು. ಆದರ್ಶ ಅಕಾಡೆಮಿಯ ರೂವಾರಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net