ಕನ್ನಡ ಸಾಹಿತ್ಯಕ್ಕೆ ಕೊಡುಗೆ ಅಪಾರ

29SND-01
ಸಿಂಧನೂರಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ಶರಣೇಗೌಡ ಮಾತನಾಡಿದರು. ಚುಸಾಪ ತಾಲೂಕು ಅಧ್ಯಕ್ಷ ಎಂ.ಭಾಸ್ಕರ್, ಪ್ರಮುಖರಾದ ಡಿ.ಎಚ್.ಕಂಬಳಿ, ರಮಾದೇವಿ ಶಂಭೋಜಿ, ಜಿ.ಜೆ.ದೇವಿರಮ್ಮ ಇದ್ದರು.
Published on

ಸಿಂಧನೂರು: ಹಿರಿಯ ಸಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಸಾಕಷ್ಟು ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ಶರಣೇಗೌಡ ಹೇಳಿದರು.

ನಗರದ ಅನಿಕೇತನ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಹಿರಿಯ ಸಾಹಿತಿ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿಮಠ ‘63 ಪುರಾತನ ಪಟಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಆಸಕ್ತಿವಹಿಸಿ ಕಾವ್ಯ, ಕಥೆ, ಚುಟುಕು ಪ್ರಕಾರದ ಬರವಣಿಗೆಗೆ ಮುಂದಾಗಬೇಕು ಎಂದರು. ಕನ್ನಡ ಉಪನ್ಯಾಸಕ ಬಸವರಾಜ ನಾಯಕ ಕೃತಿ ಪರಿಚಯಿಸಿದರು.

ಚುಸಾಪ ಜಿಲ್ಲಾ ಗೌರವ ಅಧ್ಯಕ್ಷ ಬೀರಪ್ಪ ಶಂಭೋಜಿ, ತಾಲೂಕು ಅಧ್ಯಕ್ಷ ಎಂ.ಭಾಸ್ಕರ್, ಡಾ.ಎಸ್.ವಿ.ಪಾಟೀಲ್, ಪತ್ರಕರ್ತ ಪ್ರಹ್ಲಾದ ಗುಡಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ವೆಂಕನಗೌಡ ವಟಗಲ್, ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷೆ ರಮಾದೇವಿ ಶಂಭೋಜಿ, ವಚನ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ ಜಿ.ಜೆ.ದೇವಿರಮ್ಮ, ಪ್ರಮುಖರಾದ ಎಚ್.ಎಫ್.ಮಸ್ಕಿ, ಬಸಮ್ಮ ಹಿರೇಮಠ, ಸಾವಿತ್ರಿ ಎಲೆಕೂಡ್ಲಿಗಿ, ವೆಂಕನಗೌಡ ಪಾಟೀಲ್, ಶಿಕ್ಷಕ ಅಮರೇಶ ಹೂಗಾರ, ಉಪನ್ಯಾಸಕ ರಮೇಶ ಹಲಗಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕುಂಬಾರ, ಸೋಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net