ಕನ್ನಡ ಜಾಗೃತಿ ಸಮಿತಿಗೆ ಸದಸ್ಯರ ನಾಮನಿರ್ದೇಶನ

Kannada Bhavana
Published on

 ಬೆಂಗಳೂರು: ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಎಲ್ಲಾ 31 ಜಿಲ್ಲೆಗಳು ಹಾಗೂ ಬೆಂಗಳೂರು ಸೇರಿ 11 ಮಹಾನಗರ ಪಾಲಿಕೆಗಳಲ್ಲಿನ ಕನ್ನಡ ಜಾಗೃತಿ ಸಮಿತಿಗಳಿಗೆ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲಾ ಮಟ್ಟದಲ್ಲಿ ತಲಾ 5 ಸದಸ್ಯರಂತೆ 155 ಮಂದಿ, ಮಹಾನಗರ ಪಾಲಿಕೆಗಳಿಗೆ ತಲಾ 6 ಸದಸ್ಯರಂತೆ 66 ಮಂದಿ ಹಾಗೂ ಬೆಂಗಳೂರಿನ ಎಲ್ಲಾ 28 ವಿಧಾನಸಭಾಬ ಕ್ಷೇತ್ರಗಳಿಗೆ ತಲಾ ಒಬ್ಬರಂತೆ 28 ಸದಸ್ಯರುಗಳನ್ನು ಸೇರಿ ಒಟ್ಟು 249 ಅಧಿಕಾರೇತರ ಸದಸ್ಯರನ್ನು ಕನ್ನಡ ಜಾಗೃತಿ ಸಮಿತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ.

ಈ ಹಿಂದೆ 2020ರಲ್ಲಿ ನೇಮಿಸಲಾಗಿದ್ದ ಜಿಲ್ಲಾ ಮಟ್ಟದ, ಮಹಾನಗರ ಪಾಲಿಕೆಗಳ ಹಾಗೂ ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಕನ್ನಡ ಜಾಗೃತಿ ಸಮಿತಿ ಸದಸ್ಯರ ಸದಸ್ಯತ್ವವನ್ನು ರದ್ದುಪಡಿಸಿ, ಹೊಸದಾಗಿ ಸದಸ್ಯರನ್ನು ನೇಮಿತಿ ಈ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net