ಕನ್ನಡ ಗಜಲ್ ಗಾಯನ ಯಾತ್ರೆಗೆ ಚಾಲನೆ; ಅನುರಾಗ್ ಗದ್ದಿ ಗಾಯನ

galaj
Published on

ಬೆಂಗಳೂರು: ಕನ್ನಡ ಗಜಲ್ ಕಾವ್ಯ ಶೈಲಿಯನ್ನು ಹಾಗೂ ಗಾಯನವನ್ನು ನಾಡಿನಾದ್ಯಂತ ಪ್ರಚಾರಮಾಡಬೇಕೆಂಬ ಉದ್ದೇಶದಿಂದ ಗಾಯಕ ಅನುರಾಗ್ ಗದ್ದಿ ಹಮ್ಮಿಕೊಂಡಿರುವ ಗಜಲ್ ಗಾಯನ ಯಾತ್ರೆಯ ಎರಡನೇ ಸಂಚಿಕೆಗೆ ಚಾಲನೆ ದೊರೆಯಿತು.

ಶರಣ್ಸ್ ಮ್ಯೂಸಿಕ್ ಅಕಾಡೆಮಿಯು ಇತ್ತಿಚಿಗೆ ಸಂಜಯ ನಗರದ ಶಾಸ್ತ್ರೀ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದ ಗಜಲ್ ಗಾಯನವನ್ನು ಪ್ರೇಕ್ಷಕರು ಆಸ್ವಾದಿಸಿದರು.

ಇದೇ ವೇಳೆ ಗಜಲ್ ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೆ.ವಿ.ಸತ್ಯಲಕ್ಷ್ಮಿ, ಕೆ.ವಿ.ಕೃಷ್ಣಪ್ರಸಾದ್, ಅಕಾಡೆಮಿಯ ಅಧ್ಯಕ್ಷೆ ಅಕ್ಷತಾ ಮುರಗೋಡ, ಕವಿ ರೇಣುಕಾಚಾರ್ಯ ಹಿರೇಮಠ, ಪಿ. ನಿರಂಜನ್, ತೇಜಸ್, ಮಹೇಶ್ ಮಲ್ಲೂರ ,ದೀಪಕ್ ಪವಾರ್ ಪಾಲ್ಗೊಂಡಿದ್ದರು.

ವಾದ್ಯ ವೃಂದದಲ್ಲಿ ಪಂ.ಶರಣ್ ಚೌಧರಿ ಹಾರ್ಮೋನಿಯಂ, ಶೀನಿವಾಸ್ ಕೀಬೋರ್ಡ್, ಗಿರೀಶ್ ಕೋಳಾಲ್ ವಯೋಲಿನ್ ಹಾಗೂ ಪಂ. ರಾಘವೇಂದ್ರ ಜೋಶಿ ತಬಲಾ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net