ಬೆಂಗಳೂರು: ವೀರಲೋಕ ಪ್ರಕಾಶನದ 10 ಪುಸ್ತಕಗಳ ಬಿಡುಗಡೆ ಸಮಾರಂಭ ಮಾ.23 ರಂದು ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪುಸ್ತಕ ಬಿಡುಗಡೆ ಎಂದರೆ ಕೇವಲ ಸಾಂಕೇತಿಕವಾಗಿ ಕೆಲವೇ ಕೆಲವು ಜನರ ಸಮಕ್ಷಮದಲ್ಲಿ ನಡೆಯುವ ಸರಳ ಸಮಾರಂಭ ಎಂಬ ಮಾತನ್ನು ಬದಲಿಸಿ ಬೃಹತ್ ಕಾರ್ಯಕ್ರಮದ ಮೂಲಕ ಪುಸ್ತಕ ಬಿಡುಗಡೆ ಮಾಡಲು ಟೌನ್ಹಾಲ್ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವ ವೀರಲೋಕ ಸಂಸ್ಥೆ ಕಾರ್ಯಕ್ರಮಕ್ಕೆ ಸಾಹಿತ್ಯ ಯುಗಾದಿ ಎಂದು ಹೆಸರಿಟ್ಟಿದೆ. ಯುಗಾದಿ ಎಂದರೆ ಹೊಸತು ಎಂಬ ಹಿನ್ನೆಲೆಯಲ್ಲಿ ಹೊಸ ಸ್ವರೂಪದಲ್ಲಿ ಪುಸ್ತಕ ಬಿಡುಗಡೆ ಸಂಸ್ಥೆ ಯೋಜನೆ ಹಾಕಿಕೊಂಡಿದೆ.
ಸಾಹಿತ್ಯ ಯುಗಾದಿಯಲ್ಲಿ ಸಾವಿರ ಓದುಗರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಆಯ್ದ ಕಾಲೇಜುಗಳ ಸಾಹಿತ್ಯಾಸಕ್ತ ವಿದ್ಯಾರ್ಥಿಗಳನ್ನು ಕರೆತರಲು ಆಹ್ವಾನ ನೀಡಲಾಗಿದೆ.
ಲೇಖಕರಾದ ಎಸ್.ದಿವಾಕರ್, ಜಯಶ್ರೀ ಕಾಸರವಳ್ಳಿ, ಡಾ.ಎಂ.ವೆಂಕಟಸ್ವಾಮಿ, ಚೇತನ್ ಬಡಿಗೇರ್, ಅರ್ಜುನ್ ದೇವಾಲದಕೆರೆ, ರಾಜಶೇಖರ್ ಎಂ, ನಡಹಳ್ಳಿ ವಸಂತ್, ನಟರಾಜ ಅರಳಸುರಳಿ, ಪ್ರಸಾದ್ ನಾಯ್ಕ, ಪ್ರಸಾದ್ ಶೆಣೈ ಅವರ ಕೃತಿಗಳು ಅಂದು ಬಿಡುಗಡೆಯಾಗಲಿವೆ.