

ಬೆಂಗಳೂರು: ಸಾಹಿತಿ ಚಿ.ಉದಯಶಂಕರ್ (Chi.Udayashankar) ಅವರ ಸಹೋದರ ನಿರ್ದೇಶಕ ಚಿ.ದತ್ತರಾಜ್ (Chi. Dattaraj) ಅವರು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್‌ಗೆ 87 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 1:30ಕ್ಕೆ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಡಾ.ರಾಜಕುಮಾರ್ ಅಭಿನಯದ ಕೆರಳಿದ ಸಿಂಹ , ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ ಚಿತ್ರ ನಿರ್ದೇಶಿಸಿದ್ದರು. ಶಿವರಾಜಕುಮಾರ್ ನಟನೆಯ ಮೃತ್ಯುಂಜಯ, ಆನಂದ ಜ್ಯೋತಿ ಸೇರಿದಂತೆ ಮಂಜುಳ ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು.