

ಮುದ್ದೇಬಿಹಾಳ: ಖಾಸಗೀಕರಣ, ಜಾಗತೀಕರಣ, ಉದಾರೀಕರಣದ ಕಾಲಟ್ಟಕ್ಕೆ ಹೊಂದಿಕೊಳ್ಳುತ್ತಿರುವ ಕನ್ನಡದ ನೆಲದಲ್ಲಿ ಕನ್ನಡ ಭಾಷೆ ನಿರ್ಣಾಯಕ ಟ್ಟದಲ್ಲಿದೆ. ಕನ್ನಡ ಭಾಷೆ ಕಳೆದುಕೊಳ್ಳುವ ಆತಂಕದಿಂದ ಹೊರಬರಬೇಕಾದರೆ ಪ್ರತಿಯೊಬ್ಬರೂ ಕನ್ನಡ ಉಳಿಸುವುದು ಅಗತ್ಯ ಮತ್ತು ಅನಿವಾರ್ಯ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹೇಳಿದರು.
ಇಲ್ಲಿನ ಶಹಾ, ಎಸ್.ಪಿ.ಓಸ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಯುವ ಸಂಟನೆಗಳ ಒಕ್ಕೂಟ, ಕನ್ನಡ ಜಾನಪದ ಪರಿಷತ್, ಕಾಲೇಜಿನ ಐಕ್ಯೂಎಸಿ, ಕನ್ನಡ ಸಾಂಸತಿಕ ವಿಭಾಗದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ಜಾನಪದ ರಾಜ್ಯೋತ್ಸವ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್ ವ್ಯಾಮೋಹ, ತಂತ್ರಜ್ಞಾನ, ಕಂಪ್ಯೂಟರ್ ಪ್ರಭಾವದಿಂದಾಗಿ ಕನ್ನಡ ಮೊದಲಿನ ಮೊನಚು ಕಳೆದುಕೊಳ್ಳುವುದಕ್ಕೂ ಮೊದಲೇ ಕನ್ನಡ ಸಾಹಿತ್ಯ, ಸಂಸತಿ ಮತ್ತು ಜಾನಪದವನ್ನು ಉಳಿಸುವ ಜಾನಪದ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ನಿರಂತರ ನಡೆಯಬೇಕು ಎಂದರು.
ಬಿಇಒ ಬಿ.ಎಸ್.ಸಾವಳಗಿ, ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನ್ಸಟ್ರನ್ ವರ್ಕರ್ಸ್ ೆಡರೇಷನ್ (ಐಎನ್ಬಿಸಿಡಬ್ಲುಎ್) ರಾಜ್ಯಾಧ್ಯೆ ಸಂಗೀತಾ ನಾಡಗೌಡರ, ಒಕ್ಕೂಟದ ಜಿಲ್ಲಾಧ್ಯ ಪುಂಡಲೀಕ ಮುರಾಳ ಮಾತನಾಡಿದರು.
ಸಮಾಜ ಸೇವಕ ನೇತಾಜಿ ನಲವಡೆ, ವೀರಶೈವ ಲಿಂಗಾಯತ ಸಮಾಜದ ಕಿತ್ತೂರು ಕರ್ನಾಟಕ ಅಧ್ಯ ಕಾಶಿಬಾಯಿ ರಾಂಪೂರ, ಪ್ರಾಚಾರ್ಯ ಡಾ.ಎಚ್.ಎ.ಕಟಗೂರ, ದಾನಯ್ಯಸ್ವಾಮಿ ಹಿರೇಮಠ, ಸಂಗಮೇಶ ಹಾರಿವಾಳ, ಅಲ್ಲಾಭ ನಿಡಗುಂದಿ, ದೀಪ ರತ್ನಶ್ರೀ, ಶೈಲಜಾ ಗೊಂಗಡಿ, ರಾಜುಗೌಡ ತುಂಬಗಿ, ಧನಶ್ರೀ ಉಪಸ್ಥಿತರಿದ್ದರು. ಜಾನಪದ ಕಲಾವಿದರನ್ನು ಸತ್ಕರಿಸಲಾಯಿತು. ಉಪನ್ಯಾಸಕ ಪ್ರೊ.ಸನಾವುಲ್ಲಾ ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.