

ವಿಜಯಪುರ: ಕನ್ನಡದ ಅಕ್ಷರ ಜಾತ್ರೆಯಲ್ಲೇ ಕನ್ನಡಕ್ಕೆ ಅಪಮಾನ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕೆ ಅಪಮಾನ ಆಗಿದೆ.
ಮಾರ್ಚ್ 26, 27 ರಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಪಮಾನ ಮಾಡಲಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಭಾಷೆಯ ಜಾನಪದ ಸಂಗೀತ, ನೃತ್ಯ ಮಾಡಿಸಲಾಗಿದೆ. ಮರಾಠಿ ಜಾನಪದ ಗೀತೆಯ ನೃತ್ಯಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕನ್ನಡದ ಹಬ್ಬದಲ್ಲಿ ಮರಾಠಿ ನೃತ್ಯಕ್ಕೆ ಕೆಂಡಾಮಂಡಲವಾದ ಕನ್ನಡಿಗರು, ಕನ್ನಡದ ಹಬ್ಬದಲ್ಲಿ ಮರಾಠಿ ಗೀತೆಗೆ ನೃತ್ಯ ಮಾಡಿಸಿದ್ದು ಕನ್ನಡಕ್ಕೆ, ಕನ್ನಡಾಭಿಮಾನಿಗಳಿಗೆ ಅಪಮಾನ ಮಾಡಿದಂತೆ ಎಂದಿದ್ದಾರೆ.
ಈ ಅಪಮಾನ ಮಾಡಿದ್ದು ಖಂಡನೀಯ, ಕೂಡಲೆ ಕಸಾಪ ಅಧ್ಯಕ್ಷ ಹಾಸೀಂಪೀರ ವಾಲೀಕರ ಮತ್ತು ಸಮತಿ ಸದಸ್ಯರು ಬೇಷರತ್ ಕ್ಷಮೆಯಾಚಿಸಿ, ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲು ಆಗ್ರಹಿಸಲಾಗಿದೆ. ಕನ್ನಡಿಗರ ಕ್ಷಮೆಯಾಚಿಸಿ, ರಾಜಿನಾಮೆ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಕನ್ನಡಿಗರು.