

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಲಿಕೆಗಾಗಿ ಅನ್ಯ ಭಾಷಿಕರಿಂದ ಅರ್ಜಿ ಆಹ್ವಾನಿಸಿದೆ.
ಈಗಾಗಲೇ ನಡೆಸುತ್ತಿರುವ ಕನ್ನಡ ಕಲಿಕಾ ಕೇಂದ್ರಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ರೂಪಿಸಲಾಗಿದ್ದು, ಖಾಸಗಿ ವಲಯ, ಅಪಾರ್ಟ್‌ಮೆಂಟ್, ವೈದ್ಯಕೀಯ ಕಾಲೇಜುಗಳು ಹಾಗೂ ಇತರ ಸಂಸ್ಥೆಯವರಿಗೆ ಕನ್ನಡಿಗರೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಅನ್ಯ ಭಾಷಿಕರಿಗೆ ಸಂಜೆ ಸಮಯದಲ್ಲಿ ಕನ್ನಡ ಕಲಿಸಲಾಗುವುದು. ಇದಕ್ಕಾಗಿ ಸಂವಹನ ಕೇಂದ್ರಿತವಾದ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಕನ್ನಡ ಕಲಿಕಾ ಕೇಂದ್ರಗಳಲ್ಲಿ ಕನ್ನಡ ಕಲಿಸಲು ಇಚ್ಛಿಸುವವರು ತಮ್ಮ ಸ್ವವಿವರವನ್ನು 15 ದಿನಗಳೊಳಗೆ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ263, 2ನೇ ಮಹಡಿ, ವಿಧಾನಸೌಧ, ಬೆಂಗಳೂರು-01 ಇ ಮೇಲ್: secretary.kanpragmail.com/ chairman.kanpragmail.com ಗೆ ಕಳುಹಿಸಬಹುದು. ಆಯ್ದ ಅಭ್ಯರ್ಥಿಗಳಿಗೆ ಪ್ರಾಧಿಕಾರದಿಂದ ತರಬೇತಿ ನೀಡಲಾಗುವುದು. ವಿವರಗಳಿಗೆ: ದೂ : 080 22286773 ಸಂಪರ್ಕಿಸಬಹುದು.