ಶಕ್ತಿಸೌಧದಲ್ಲಿ ಕನ್ನಡದ ಘೋಷವಾಕ್ಯ : ಸಾರ್ವಜನಿಕರಿಂದ ಸಲಹೆ ಆಹ್ವಾನ

Kannada Bhavana
Published on

ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸಸೌಧಗಳನ್ನು ಕನ್ನಡದ ಅಸ್ಮಿತೆಯ ಕೇಂದ್ರಗಳಾಗಿ ಮರುರೂಪಿಸುವುದಕ್ಕಾಗಿ ಈ ಕಟ್ಟಡಗಳಲ್ಲಿ ಕನ್ನಡಪರ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದೆ.

ಸಾರ್ವಜನಿಕರು ಸಾಹಿತ್ಯಕ ಘೋಷವಾಕ್ಯಗಳಲ್ಲದೇ ಜನಪದದ ಸೂಕ್ತಿಗಳು, ಚಳವಳಿಗಳ ಘೋಷಣೆಗಳು, ಸಿನಿಮಾ ಗೀತೆಗಳನ್ನು ಸಹ ಅವಲೋಕಿಸಿ ಮೌಲ್ಯಯುತ ಸಲಹೆಗಳನ್ನು ನೀಡಬಹುದು. ಘೋಷವಾಕ್ಯಗಳು ಗದ್ಯ- ಪದ್ಯಗಳ ಎರಡು ನೆಲೆಗಳಲ್ಲಿರಬೇಕು. ಅದನ್ನು ಓದಿದವರಲ್ಲಿ ಕನ್ನಡದ ಅಭಿಮಾನ ಜಾಗೃತವಾಗಬೇಕು. ಕನ್ನಡದ ಪ್ರಮುಖ ಉಪ ಸಂಸ್ಕೃತಿಗಳ ಒಳಗನ್ನು ತೆರೆದಿಡುವ ವಾಕ್ಯಗಳನ್ನು ಸಹ ಅವಲೋಕಿಸಬಹುದು ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ನಿರಾಶದಾಯಕ ನುಡಿಗಳು, ವಿವಾದಾತ್ಮಕ ಹೇಳಿಕೆಗಳನ್ನು ಹೊರತುಪಡಿಸಿ ಗರಿಷ್ಠ ಎರಡು ಸಾಲುಗಳ ಘೋಷವಾಕ್ಯಗಳನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿಸಿ ತಮ್ಮ ಹೆಸರು, ದೂರವಾಣಿ ಸಂಖ್ಯೆ ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಿ 30ರೊಳಗೆ ಕಳುಹಿಸಬೇಕು ಎಂದಿದ್ದಾರೆ.

ವಿಳಾಸ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಿಂಚಂಚೆ:  chairman.kanpragmail.com ಗೆ ಕಳುಹಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net