ಮನೆ ತೆರಿಗೆ ಶೇ.5 ರಿಯಾಯಿತಿ : ಕಾಣಿಯೂರು ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾಹಿತಿ

New Project (15)
Published on

ಕಡಬ: ಕಾಣಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿಯಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಆಯಾ ವಾರ್ಡ್‌ನ ಸದಸ್ಯರು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಗಣೇಶ್ ಉದನಡ್ಕ ಹೇಳಿದರು.

ಗ್ರಾಮ ಪಂಚಾಯಿತಿಗೆ ಸಲ್ಲತಕ್ಕ ಮನೆ ತೆರಿಗೆಯನ್ನು ಜೂನ್ ತಿಂಗಳ ಅಂತ್ಯದ ಒಳಗೆ ಪಾವತಿಸಿದ್ದಲ್ಲಿ ಶೇ.5 ರಿಯಾಯಿತಿ ನೀಡುವುದರಿಂದ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಸ್ಥರು ಮನೆ ತೆರಿಗೆ ಪಾವತಿಸಬೇಕು ಎಂದು ಪಿಡಿಒ ರಘು ಎನ್.ಬಿ. ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಗಣೇಶ್ ಉದನಡ್ಕ, ಲೋಕಯ್ಯ ಪರವ ದೋಳ್ಪಾಡಿ, ಪ್ರವೀಣ್ ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ಸುಲೋಚನಾ ಮಿಯೋಳ್ಪೆ, ತೇಜಕುಮಾರಿ ಉದ್ಲಡ್ಡ, ಲಲಿತಾ ದರ್ಖಾಸು, ಕೀರ್ತಿಕುಮಾರಿ ಅಂಬುಲ, ಮೀರಾ ಕಳೆಂಜೋಡಿ, ಸುನಂದ ಅಬ್ಬಡ, ಅಂಬಾಕ್ಷಿ ಕೂರೇಲು ಉಪಸ್ಥಿತರಿದ್ದರು.

ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಅವರು ಇಲಾಖೆಯ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಸಿಬ್ಬಂದಿ ಚಿತ್ರಾ, ಕುಮಾರ್, ಶಶಿಕಲಾ, ರಕ್ಷಿತ್, ಪಾರ್ವತಿ, ಧನಂಜಯ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net