ಕಾನ್ಬೆಟ್ಟು ಕುಚ್ಚೂರು ದೇವಳ ಬ್ರಹ್ಮಕಲಶ, ಕೆಂಡೋತ್ಸವ

AMMA
Published on

ಹೆಬ್ರಿ: ಕಾನ್ಬೆಟ್ಟು ಕುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಮತ್ತು ಕೆಂಡೋತ್ಸವ ಫೆ.4ರಿಂದ 6ರ ತನಕ ನಡೆಯಲಿದೆ. ದೇವರಿಗೆ ಪುಣ್ಯಹನಾಂದಿ, ಗಣಪತಿ ಹೋಮ, ನವಗ್ರಹ ಹೋಮ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ ನಡೆಯಿತು. ಬುಧವಾರ ಪುಣ್ಯಾಹ ಪ್ರಾಯಶ್ಚಿತಾದಿ ಹೋಮ, ಅಷ್ಟೋತ್ತರ ಶತ ಕಲಶ ಮಂಡಲ ರಚನೆ ಹಾಗೂ ಬ್ರಹ್ಮಕಲಶ ಸ್ಥಾಪನೆ, ಗುರುವಾರ ಪುಣ್ಯಾಹ ಚಂಡಿಕ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ, ಅನ್ನಸಂತರ್ಪಣೆ, ಕೆಂಡೋತ್ಸವ ನಡೆಯಲಿದೆ. ಪ್ರಮುಖರಾದ ಕೆ.ಸಹದೇವ ಶೆಟ್ಟಿ, ಕೆ.ಕರುಣಾಕರ ಶೆಟ್ಟಿ, ಎಚ್.ಸುಬ್ರಹ್ಮಣ್ಯ ಆಚಾರ್ಯ, ಪ್ರವೀಣ್ ಕುಮಾರ್ ಶೆಟ್ಟಿ, ಗ್ರಾಮಸ್ಥರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net