ಐವರು ದರೋಡೆಕೋರರ ಬಂಧನ ಕನಕಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ

Arrest Kaidhi
Published on

 ಕನಕಪುರ

ಕೋಡಿಹಳ್ಳಿ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ವಾಹನ ಸವಾರರನ್ನು ತಡೆದು ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದ ಐವರನ್ನು ಗುರುವಾರ ಬಂಧಿಸಿರುವ ಕನಕಪುರ ಪೊಲೀಸರು 3330 ರೂ.ನಗದು, 2 ಬೈಕ್, ಒಂದು ಡ್ಯಾಗರ್, 3 ಮೊಬೈಲ್ ೆನ್, 2 ದೊಣ್ಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶ್ರೀನಿವಾಸನಹಳ್ಳಿಯ ಮನು, ರಾಕೇಶ್, ಕನಕಪುರದ ಕುರುಪೇಟೆ ವಾಸಿಗಳಾದ ದೀಪು, ಕಿರಣ್ ಹಾಗೂ ಹರ್ಷಿತ್ ಬಂಧಿತರು.

ಜೂ.25ರ ರಾತ್ರಿ 11 ಗಂಟೆ ಸಮಯದಲ್ಲಿ ಟಿ.ಬೇಕುಪ್ಪೆ ಹಾಗೂ ಶ್ರೀನಿವಾಸನಹಳ್ಳಿ ನಡುವಿನ ಕುಂಟೆ ಡಾಬಾ ಬಳಿ ಆರೋಪಿಗಳು ವಾಹನ ಸವಾರರ ಮೇಲೆ ಹಲ್ಲೆ ನಡೆಸಿದ್ದರು.

ಕೋಡಿಹಳ್ಳಿಯ ಕೋಳಿ ಅಂಗಡಿ ಮಾಲೀಕ ಅನ್ವರ್‌ಖಾನ್ ಹಾಗೂ ಶೇಖ್ ಷರೀಫ್ ಎಂಬುವವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಗಾಯಗೊಂಡಿದ್ದ ಅವರು ಚಿಕಿತ್ಸೆ ಪಡೆದು ಕನಕಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅನ್ವರ್‌ಖಾನ್ ಗಂಭೀರ ಗಾಯವಾಗಿದ್ದು, ಅವರ ಮೊಬೈಲ್ ೆನ್, 8 ಸಾವಿರ ನಗದು ಹಾಗೂ ಚಿನ್ನದ ಉಂಗುರ ದೋಚಿದ್ದರು.

ನಂತರ ಅದೇ ದಿನ ಬೋಳಮಲ್ಲಪ್ಪನದೊಡ್ಡಿಯ ಆನಂದ, ಆತನ ಸೋದರ ಬೈಕ್‌ನಲ್ಲಿ ತೆರಳುತ್ತಿದ್ದಾಗ ಇದೇ ಗ್ಯಾಂಗ್ ಅಡ್ಡಗಟ್ಟೆ ಹಲ್ಲೆ ನಡೆಸಿತ್ತು. ಅವರ ಹೊಡೆತಕ್ಕೆ ಹೆಲ್ಮೆಟ್ ಮುರಿದು ತಲೆಗೆ ಸಣ್ಣ-ಪುಟ್ಟ ಗಾಯಗಳಾಗಿತ್ತು. ಈ ಘಟನೆ ನಡೆದ ಒಂದು ಗಂಟೆ ನಂತರ ಇದೇ ರಸ್ತೆಯಲ್ಲಿ ತೆರಳುತ್ತಿದ್ದವರ ಮತ್ತೊಬ್ಬರೂ ಇದೇ ತಂಡ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿತ್ತು. ಈ ಮೂರು ಪ್ರಕರಣಗಳ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ದರೋಡೆಕೋರರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್.ಕೃಷ್ಣ, ಗ್ರಾಮಾಂತರ ಸಬ್‌ಇನ್‌ಸ್ಪೆಕ್ಟರ್ ಮನೋಹರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ನಗರದ ಪೈಪ್‌ಲೈನ್ ರಸ್ತೆಯಲ್ಲಿ ಬರುತ್ತಿದ್ದ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ತಂಡ ವಶಕ್ಕೆ ಪಡೆದಿದೆ. ಮತ್ತೊಬ್ಬ ಆರೋಪಿ ಬೆಂಗಳೂರಿನ ಆಸ್ಪತ್ರಯೊಂದರಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಅವನನ್ನೂ ವಶಕ್ಕೆ ಪಡೆದು ತನಿಖೆ ನಡೆಸಿದೆ. ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net