

ರಾಮನಗರ
ಬೂತ್ ಏಜೆಂಟ್ ಇದ್ದ ಮಾತ್ರಕ್ಕೆ ಮತಗಳು ಬರುತ್ತವೆ ಎನ್ನುವಂತೆ ಇಲ್ಲ. ಬೂತ್ ಏಜೆಂಟ್ಗಳು ಇಲ್ಲದೆಯೂ ಎಷ್ಟೋ ಮಂದಿ ಮಹನೀಯರು ಗೆಲುವು ಸಾಧಿಸಿದ ಉದಾಹರಣೆ ಇವೆ, ಕನಕಪುರವನ್ನು ಡಿ.ಕೆ.ಶಿವಕುಮಾರ್ ಅವರ ಕಪಿಮುಷ್ಠಿಯಿಂದ ಮುಕ್ತಿಗೊಳಿಸಲು ಜನತೆ ಕಾಯುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.
ಕನಕಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ಗಳೇ ಇಲ್ಲ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕನಕಪುರ ಡಿ.ಕೆ.ಶಿವಕುಮಾರ್ ಅವರ ಕಪಿಮುಷ್ಠಿಯಲ್ಲಿದೆ. ಅದರಿಂದ ಜನರು ಹೊರಗಡೆ ಬರಲು ತೀಮಾರ್ನ ಮಾಡಿದ್ದಾರೆ. ಎಲ್ಲ ಬೂತ್ಗಳಲ್ಲೂ ಬಿಜೆಪಿ ಏಜೆಂಟ್ಗಳು ಇರುತ್ತಾರೆ. ಕಾಂಗ್ರೆಸ್ನಲ್ಲಿ ನೊಂದಿರುವವರ ಮತಗಳೂ ನಮಗೆ ಬರಲಿವೆ ಎಂದರು.
ಕನಕಪುರದಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇಲ್ಲಿ ಬಿಎಸ್ಎಫ್ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವಂತೆ ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಈ ಬಾರಿ ಸೂಕ್ತ ಭದ್ರತೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ವನಾಶ
ಬಜರಂಗದಳ ಬ್ಯಾನ್ ವಿಚಾರ ಕಾಂಗ್ರೆಸ್ ಮತ್ತಷ್ಟು ಸ್ಥಾನಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಬಜರಂಗದಳ ಹಿಂದು, ಗೋವು ರಕ್ಷಣೆ ಮಾಡುವ ಒಂದು ಸಂಟನೆ. ಕಾಂಗ್ರೆಸ್ನವರು ಬಜರಂಗದಳವನ್ನು ಪಿಎ್ಐಗೆ ಹೋಲಿಸುವುದನ್ನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಕುಂಕುಮವನ್ನು ವಿರೋಧ ಮಾಡ್ತಾರೆ. ಟಿಪ್ಪು ಸುಲ್ತಾನ್ ಓಲೈಕೆ ಮಾಡಿಕೊಳ್ಳುತ್ತಾರೆ. ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ನಿರಂತರವಾಗಿ ಮಾಡುತ್ತಲೇ ಬಂದಿದೆ. ಈ ಮೂಲಕ ತನ್ನ ಸರ್ವನಾಶಕ್ಕೆ ತಾನೇ ನಾಂದಿ ಹಾಡಿದೆ. ಲಂಕೆಯಲ್ಲಿ ರಾವಣ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ. ಆದರೆ, ಅದರಿಂದ ಲಂಕೆಯೇ ಸುಟ್ಟುಹೋಯಿತು. ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಕಾಂಗ್ರೆಸ್ಗೆ ವ್ಯತಿರಿಕ್ತವಾಗುತ್ತವೆ ಎಂದು ಅಶೋಕ್ ಹೇಳಿದರು.
ಕುಂಕುಮ ಇಡಲು ಬಿಡೋದಿಲ್ಲ
ಅಖಂಡ ಶ್ರೀನಿವಾಸಮೂರ್ತಿ ಒಬ್ಬ ದಲಿತ. ಈತನ ಮನೆಗೆ ಬೆಂಕಿ ಹಚ್ಚಿದವರು ಇಂದು ಚೆನ್ನಾಗಿಯೇ ಇದ್ದಾರೆ. ಆದರೆ ಮುಲ್ಲಾಗಳ ಮಾತಿಗೆ ಬೆಲೆ ಕೊಟ್ಟು, ಶ್ರೀನಿವಾಸ್ಗೆ ಮತ್ತೆ ಟಿಕೆಟ್ ನೀಡಲಿಲ್ಲ. ಕನಕಪುರದಲ್ಲಿ ಮುನೇಶ್ವರ ಬೆಟ್ಟವನ್ನು ಯೇಸು ಬೆಟ್ಟವನ್ನಾಗಿ ಮಾಡಲು ಹೋಗಿದ್ದರು, ಈಗ ಆಂಜನೇಯನ ಸುದ್ದಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರು ಕುಂಕುಮ ಇಡುವುದಕ್ಕೂ ಬಿಡೋದಿಲ್ಲ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್ ಕಿಡಿಕಾರಿದರು.
ನಾನೂ ಬಜರಂಗಿ
ನಾನು ಕೂಡ ಬಜರಂಗಿಯೇ. ನೋಡೋಣ ಬನ್ನಿ. ನಮ್ಮ ಮನೆ ಹತ್ತಿರ, ಬಂದು ಏನು ಮಾಡ್ತೀರಿ ನೋಡೋಣ.
ಎಲ್ಲರೂ ಕೂಡ ಆರೆಸ್ಸೆಸ್, ಬಜರಂಗದಳದಿಂದ ಬಂದಿರೋದು. ನಿಮಗೆ ತಾಕತ್ತು, ಧಮ್ ಇದೆಯಾ ಬ್ಯಾನ್ ಮಾಡೋಕೆ. ಪಾಕಿಸ್ತಾನಕ್ಕೆ ಜೈ ಅನ್ನೋ ಸಂಸ್ಕಾರ ನಮ್ಮದಲ್ಲ ಎಂದು ಅಶೋಕ್ ಸವಾಲು ಹಾಕಿದರು.
ಕೀಳುಮಟ್ಟದ ರಾಜಕಾರಣ
ಮಲ್ಲಿಕಾರ್ಜುನ ರ್ಖಗೆ ಅವರು ಮೋದಿ ಅವರನ್ನು ವಿಷ ಸರ್ಪ ಎಂದಿದ್ದಾರೆ, ರಾಜಕಾರಣದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಸಾಮಾನ್ಯ. ಆದರೆ ಎಂದೂ ನಮ್ಮ ಪ್ರಧಾನಿ ಬೇರೆಯವರ ಬಗ್ಗೆ ಹಗುರವಾಗಿ ಮತ್ತು ದ್ವೇಷಪೂರಿತವಾಗಿ ಮಾತನಾಡಿಲ್ಲ, ಆದರೆ ಒಬ್ಬ ಪ್ರಧಾನಿ ಬಗ್ಗೆ ಮಾತನಾಡಬೇಕಾದರೆ ಯೋಚನೆ ಮಾಡದೆ, ಕೀಳು ಮಟ್ಟದ ರಾಜಕಾರಣವನ್ನು ರ್ಖಗೆ ಮಾಡಿದ್ದಾರೆ ಎಂದು ಅಶೋಕ್ ಟೀಕಿಸಿದರು.
ಕನಕಪುರಕ್ಕೆ ಷಾ?
8ರಂದು ಅಮಿತ್ ಷಾ ಅವರು ಕನಕಪುರಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಅಶೋಕ್ ಹೇಳಿದರು. ಸಿಎಂ ಅವರ ಸಮಯವನ್ನೂ ಕೇಳಿದ್ದೇವೆ. ಅವರು ಸಮಯ ಕೊಟ್ಟರೆ ಇಬ್ಬರಿಂದಲೂ ಒಟ್ಟಿಗೆ ರೋಡ್ ಶೋ ನಡೆಸಲಾಗುತ್ತದೆ. ಸಂಸದ ತೇಜಸ್ವಿ ಸೂರ್ಯ ಶುಕ್ರವಾರ ಕನಕಪುರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಡಿಕೆಶಿ ವಿರೋಧಿ ಅಲೆ ಇದೆ. ಹಾಗಾಗಿ ನಾವು ಗೆಲ್ಲುವ ವಾತಾವರಣ ಇದೆ. ಇಲ್ಲಿ ಜೆಡಿಎಸ್ ಕೂಡ ಪ್ರಚಾರ ಮಾಡುತ್ತಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬಂದಿಲ್ಲ. ಇದು ನಮಗೆ ವರದಾನವಾಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಅಪ್ಪಾಜಿಗೌಡ ಮುಂತಾದವರು ಇದ್ದರು.