

ಕನಕಪುರ
ನಗರದ ಎಂ.ಜಿ.ರಸ್ತೆಯಲ್ಲಿ ಇನ್‌ಫೋಸಿಸ್ ಫೌಂಡೇಷನ್ ವತಿಯಿಂದ 56 ಕೋಟಿ ರೂ. ವೆಚ್ಚದಲ್ಲಿ ನಿರ್ವಾಣವಾಗಿರುವ ಸುಸಜ್ಜಿತ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಯಿತು.
ಭಾನುವಾರ ಬೆಳಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಆಸ್ಪತ್ರೆ ಉದ್ಘಾಟಿಸಿ ಆಸ್ಪತ್ರೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ನಂತರ ಮಾತನಾಡಿದ ಡಾ.ಕೆ. ಸುಧಾಕರ್, ಇನ್‌ಫೋಸಿಸ್ ಸಂಸ್ಥೆ ಕನಕಪುರದಲ್ಲಿ ಕೋಟ್ಯಂತರ ರೂ. ನೆರವು ನೀಡಿ ನಿರ್ಮಿಸಿರುವ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಉದ್ಘಾಟಿಸಿರುವುದು ಸಂತಸ ತಂದಿದೆ. ಅದಕ್ಕಾಗಿ ಸುಧಾ ಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತಾಲೂಕು ಕೇಂದ್ರಕ್ಕೆ ನೂತನವಾಗಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನಮ್ಮ ಕ್ಲಿನಿಕ್ ಹಾಗೂ ಆಯುಷ್ಮತಿ ಕ್ಲಿನಿಕ್ ಮಂಜೂರು ವಾಡಿರುವುದಾಗಿ ೋಷಿಸಿದ ಸುಧಾಕರ್, ಈಗ ಹೊಸದಾಗಿ ಪ್ರಾರಂಭಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ಒದಗಿಸುವ ಜತೆಗೆ ಶೇ.100ರಷ್ಟು ಅಗತ್ಯ ಸಿಬ್ಬಂದಿ ನೇಮಿಸಲಾಗುವುದು ಎಂದರು.
ಮೆಡಿಕಲ್ ಕಾಲೇಜು ಕೈತಪ್ಪಿದ್ದಕ್ಕೆ ವಿಷಾದ
ಶಾಸಕ ಡಿ.ಕೆ. ಶಿವಕುವಾರ್ ವಾತನಾಡಿ, ಸುಧಾ ಮೂರ್ತಿ ಅವರ ಇನ್‌ಫೋಸಿಸ್ ಸಂಸ್ಥೆ ನೆರವಿನಿಂದಾಗಿ ಕನಕಪುರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಾಣವಾಗಿದೆ. ಇದರಿಂದ ಗ್ರಾಮೀಣ ಹೆಣ್ಣುಮಕ್ಕಳು ದೊಡ್ಡ ನಗರಗಳಿಗೆ ಚಿಕಿತ್ಸೆಗಾಗಿ ಅಲೆಯುವುದು ತಪ್ಪಲಿದೆ. ತಾಲೂಕಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವಾಡಬೇಕು ಎನ್ನುವುದು ಈ ಭಾಗದ ಜನರ ಹಾಗೂ ನನ್ನ ಕನಸಾಗಿತ್ತು. ಇದಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಅನುಮೋದನೆ ದೊರಕಿ ಸ್ಥಳವನ್ನೂ ನಿಗದಿಪಡಿಸಲಾಗಿತ್ತು. ಭೂಮಿಪೂಜೆ ನೆರವೇರಿಸುವ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ತಾಲೂಕು ಜನರ ಕೈಜಾರಿತು. ನಂತರ ಯಡಿಯೂರಪ್ಪ, ಬೊವ್ಮಾಯಿಯವರು ಕೊಟ್ಟ ವಾತನ್ನು ಉಳಿಸಿಕೊಳ್ಳಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಲೇಜು ಕೈತಪ್ಪಲು ನಾನು ಕಾರಣನಲ್ಲ
ಕನಕಪುರಕ್ಕೆ ಮೆಡಿಕಲ್ ಕಾಲೇಜು ತಪ್ಪಲು ನಾನು ಕಾರಣನಲ್ಲ. ಹಿಂದಿನ ಸರ್ಕಾರವಿದ್ದಾಗಲೇ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಕಾರಣಾಂತರದಿಂದ ಕೈತಪ್ಪಿ ಹೋಗಿತ್ತು. ಮತ್ತೆ ಅದು ನಮ್ಮ ತಾಲೂಕಿಗೆ ದೊರಕಿದೆ. ಮುಂದಿನ ದಿನಗಳಲ್ಲಿ ಕನಕಪುರಕ್ಕೂ ಮೆಡಿಕಲ್ ಕಾಲೇಜು ದೊರಕಲಿದೆ. ಶಾಸಕ ಡಿ.ಕೆ. ಶಿವಕುವಾರ್ ಆಶಯದಂತೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಹಕಾರವಿದೆ. ಈಗಾಗಲೇ ಕನಕಪುರದ ಹೌಸಿಂಗ್‌ಬೋರ್ಡ್‌ನಲ್ಲಿ 20 ಎಕರೆ ಜಮೀನು ಗುರುತಿಸಲಾಗಿದೆ. ಇಲ್ಲಿ ಕಾಲೇಜು ಸ್ಥಾಪನೆಗೆ ಸರ್ಕಾರ ಚಿಂತಿಸಿದೆ ಎಂದು ಸುಧಾಕರ್ ಹೇಳಿದರು.
ನರೇಗಾ ಕ್ರಾಂತಿಕಾರ ಡಿಕೆಶಿ
ಡಿ.ಕೆ.ಶಿವಕುವಾರ್ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾಗ 15ರಿಂದ 20 ಸಾವಿರದ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ನಂತರ 70ರಿಂದ 90 ಸಾವಿರದವರೆಗೂ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ. ಒಬ್ಬ ಶಾಸಕರಾಗಿ ಉತ್ತಮ ಅಭಿವದ್ಧಿ ಕೆಲಸಗಳನ್ನು ವಾಡಿದ್ದಾರೆ. ನರೇಗಾ ಕೆಲಸವನ್ನು ಗ್ರಾಮೀಣ ಪ್ರದೇಶದಲ್ಲಿ ಬಳಸಿಕೊಂಡು ಕ್ರಾಂತಿಕಾರಿ ಅಭಿವದ್ಧಿ ವಾಡಿದ್ದಾರೆ ಎಂದು ನರೇಗಾ ಕಾಮಗಾರಿಗಳ ಬಗ್ಗೆ ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಡಿ.ಕೆ.ಸುರೇಶ್ ವಾತನಾಡಿ, ಇನ್‌ಫೋಸಿಸ್ ಸಂಸ್ಥೆ ನೆರವಿನಿಂದ ಸುಸಜ್ಜಿತ ಆಸ್ಪತ್ರೆ ಆರಂಭವಾಗಿದೆ. ಇವರು ನಿರ್ಮಿಸಿಕೊಟ್ಟ ಆಸ್ಪತ್ರೆಯ ಋಣವನ್ನು ನಾವೆಂದೂ ತೀರಿಸಲಾಗದು ಎಂದು ಸುಧಾ ಮೂರ್ತಿ ಅವರ ಗುಣಗಾನ ವಾಡಿದರು.
ಕಾರ್ಯಕ್ರಮದಲ್ಲಿ ಇನ್‌ಫೋಸಿಸ್ ಫೌಂಡೇಷನ್‌ನ ಟ್ರಸ್ಟಿ ಸುನಿಲ್‌ಕುವಾರ್ ಧಾರೇಶ್ವರ್ ಮತ್ತಿತರರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ವಾಜಿ ಅಧ್ಯಕ್ಷ ಕೆ.ಎನ್.ದಿಲೀಪ್, ನಗರಸಭಾಧ್ಯಕ್ಷ ಕೆ.ಟಿ.ಕಿರಣ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುವಾರ್, ಪ್ರಾದೇಶಿಕ ಆಯುಕ್ತ ಅವ್ಲಾನ್ ಆದಿತ್ಯ ಜಸ್ವಾನ್, ಆಯುಕ್ತ ಡಿ. ರಂದೀಪ್, ನಿರ್ದೇಶಕಿ ಡಾ. ಇಂದುಮತಿ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್‌ಪಿ ಕಾರ್ತಿಕ್‌ರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಪಿ.ಕಾಂತರಾಜು ಮುಂತಾದವರು ಭಾಗವಹಿಸಿದ್ದರು.