

ಕನಕಪುರ: ಭಾರತೀಯ ಸೇನೆಯಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ತನ್ನೂರಿಗೆ ಮರಳಿಗೆ ಯೋಧ ಸಿ. ಆನಂದ್ ಕುಮಾರ್ ಅರವರಿಗೆ ಕನಕಪುರ ಜನತೆ ಭವ್ಯ ಸ್ವಾಗತವನ್ನು ಕೋರಿದ್ದಾರೆ.
ತಾಲೂಕಿನ ಬಿ.ಎಸ್ ದೊಡ್ಡಿ ಗ್ರಾಮದವರಾ ಯೋಧ ಆನಂದ್ ಕುಮಾರ್ ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತನ್ನೂರಿಗೆ ಸೋಮವಾರ ಮರಳಿದರು. ಇವರನ್ನು ಕನ್ನಡ ಪರ ಸಂಘಟನೆಗಳು, ದೇಶಾಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡರು.
ನಗರಕ್ಕೆ ಆಗಮಿಸಿದ ಯೋಧನನ್ನು ಅದ್ದೂರಿಯಾಗಿ ಬರಮಾಡಿಕೊಂಡು ಜೈಹೋ... ಜೈಹೋ... ಘೋಷಣೆಗಳನ್ನು ಕೂಗಿದರು. ನಗರದಲ್ಲಿ ಮೆರವಣಿಗೆ ನಡೆಸಿ ಹೂವಿನ ಮಳೆಯನ್ನು ಸುರಿಸಿದರು. ನಗರದ ಆರ್ ಇ ಎಸ್ ಕಾಲೇಜು ಆವರಣದ ಪೂಜ್ಯ ಕರಿಯಪ್ಪನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರ ಸಮಾಧಿಗೂ ನಮನವನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಯೋಧ ಸಿ. ಆನಂದ್ ಕುಮಾರ್, ನನ್ನ ಬಾಲ್ಯ ಕನಕಪುರದಲ್ಲಿ ಕಳೆದಿದ್ದೇನೆ. ಕರ್ಮಯೋಗಿ ಪೂಜ್ಯ ಎಸ್. ಕರಿಯಪ್ಪನವರ ಶಾಲೆಯಲ್ಲಿ ವಿದ್ಯೆಯನ್ನು ಕಲಿತು ಜ್ಞಾನವಂತರಾಗಿ ನಂತರ ಯೋಧನಾಗಬೇಕೆಂಬ ಆಸೆಯನ್ನು ಪೂರೈಸಿಕೊಂಡು ಬಂದಿದ್ದೇನೆ. ಇಂದಿನ ಸ್ಥಿತಿಯಲ್ಲಿ ಯುವಕರು ದೇಶ ಮತ್ತು ನಾಡಪ್ರೇಮ ಬೆಳಸಿಕೊಳ್ಳುವಂತೆ ಕರೆ ನೀಡಿದರು.
ಈ ವೇಳೆ ನಗರಸಭಾ ಅಧ್ಯಕ್ಷ ಕೆ.ಟಿ. ಕಿರಣ್, ಸದಸ್ಯ ಸ್ಟುಡಿಯೋ ಚಂದ್ರು, ಗ್ರಾಪಂ. ಸದಸ್ಯ ಜಯರಾಮೇಗೌಡ, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಭಾಸ್ಕರ್, ಕ.ರ.ವೆ ಕಬ್ಬಾಳೇಗೌಡ, ರೈತ ಸಂಘದ ಶ್ರೀನಿವಾಸ್, ಜಯಕರ್ನಾಟಕ ಸಂಘಟನೆ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಎನ್.ಸಿ.ಸಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು, ಅಭಿಮಾನಿಗಳು ಭಾಗವಹಿಸಿದ್ದರು.