

ಕನಕಪುರ: ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ್ಸದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಕಪುರದ ಪುರುಷೋತ್ತಮ್ ಎಂಬುವರು ಚಿಕಿತ್ಸೆ ಫಲಕಾರಿ ಆಗದೆ ಗುರುವಾರ ಮೃತಪಟ್ಟಿದ್ದಾರೆ.
ಕನಕಪುರ ನಗರದ ಮೇಗಳ ಬೀದಿ ಪುರುಷೋತ್ತಮ್ಮ (35) ಮೃತಪಟ್ಟವರು. ಕಳೆದ 20 ದಿನಗಳ ಹಿಂದೆ ಕಾರಿನಲ್ಲಿ ಪತ್ನಿ ನಂದಿನಿ ಹಾಗೂ ಒಂದು ವರ್ಷದ ಮಗುವಿನೊಂದಿಗೆ ನಗರದಿಂದ ಬಿಡದಿಗೆ ತೆರಳುವ ಮಾರ್ಗ ಮಧ್ಯ ಕಲ್ಲುಗೋಪಳ್ಳಿ ಬಳಿ ಟಿಪ್ಪರ್ ಲಾರಿಗೆ ಗುದ್ದಿ ಅಪಘಾತ ಸಂಭವಿಸಿತ್ತು. ಮಗು ಸ್ಥಳದಲ್ಲಿಯೆ ಸಾವನ್ನಪ್ಪಿತ್ತು ಪತ್ನಿ ನಂದಿನಿಗೆ ಸಣ್ಣಪುಟ್ಟ ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ, ಪುರುಷೋತ್ತಮ್ ತಲೆಗೆ ತೀವ್ರ ಪಟ್ಟು ಬಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತ್ತು.
ಚಿಕಿತ್ಸೆ ಪಲಕಾರಿಯಾಗದೆ, ಗುರುವಾರ ಮೃತಪಟ್ಟಿದ್ದಾರೆ, ಶುಕ್ರವಾರ ನಗರದ ದೇಗುಲು ಮಟದ ರುದ್ರ ಭೂ"ುಯಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.