ವಾಂತಿಬೇಧಿಯಿಂದ ಮೃತರಾದ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ

CHEK VITARANE
ವಾಂತಿಬೇಧಿಯಿಂದ ಮೃತಪಟ್ಟಿದ್ದ ವೃದ್ಧೆ ಹೊನ್ನಮ್ಮನ ಕುಟುಂಬಸ್ಥರಿಗೆ ಸಚಿವ ಶಿವರಾಜ ತಂಗಡಗಿ ಶನಿವಾರ ಪರಿಹಾರ ಚೆಕ್ ವಿತರಿಸಿದರು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್ ಇತರರಿದ್ದರು.
Published on

ಕನಕಗಿರಿ: ವಾಂತಿಭೇದಿಯಿಂದ ಮೃತಪಟ್ಟಿದ್ದ ತಾಲೂಕಿನ ಬಸರಿಹಾಳ ಗ್ರಾಮದ ವೃದ್ಧೆ, ಮಗುವಿನ ಕುಟುಂಬಸ್ಥರಿಗೆ ಹಾಗೂ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಕುರಿ, ಎತ್ತುಗಳ ವಾರಸುದಾರರಿಗೆ ಸಚಿವ ಶಿವರಾಜ ತಂಗಡಗಿ ಶನಿವಾರ ಪರಿಹಾರದ ಚೆಕ್ ವಿತರಿಸಿದರು.

ವಾಂತಿಭೇದಿ ಪ್ರಕರಣದಿಂದ ಸಾವನ್ನಪ್ಪಿದ್ದ ಬಸರಿಹಾಳದ ವೃದ್ಧೆ ಹೊನ್ನಮ್ಮ, ಒಂದೂವರೆ ವರ್ಷದ ಬಾಲಕಿ ಶ್ರುತಿ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ರೂ. ಚೆಕ್ ವಿತರಿಸಿದರಲ್ಲದೆ, ವಿದ್ಯುತ್ ಶಾಕ್‌ನಿಂದ ಕರಡಿಗುಡ್ಡದಲ್ಲಿ ಮೃತಪಟ್ಟಿದ್ದ ಎರಡು ಎತ್ತುಗಳಿಗೆ ಒಂದು ಲಕ್ಷ ರೂ. ಹಾಗೂ 8 ಕುರಿಗಳ ಮಾಲೀಕನಿಗೆ 64 ಸಾವಿರ ರೂ, 6 ಕುರಿಗಳ ಮಾಲೀಕರಿಗೆ 50 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದರು.

ನಂತರ ಮಾತನಾಡಿದ ಅವರು, ಸಿಎಂಗೆ ಒತ್ತಾಯ ಮಾಡಿ ವಾಂತಿಬೇಧಿ ಪ್ರಕರಣದಲ್ಲಿ ಅಸುನೀಗಿದ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಘಟನೆ ನಡೆದಾಗಲೇ ಒತ್ತಾಯಿಸಿದ್ದು, ಮುಖ್ಯಮಂತ್ರಿಗಳು ಸಮ್ಮತಿಸಿದ್ದರು.

ಅದರಂತೆ ಬಿಜಕಲ್ ಗ್ರಾಪಂ ವ್ಯಾಪ್ತಿಯಲ್ಲಿ ವಾಂತಿಭೇದಿಯಿಂದ ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಈಗಾಗಲೇ 2 ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಾಗಿದ್ದು, ಇದೀಗ ಬಸರಿಹಾಳ ಗ್ರಾಮದಲ್ಲಿ ಮೃತರ ಕುಟುಂಬಸ್ಥರಿಗೆ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ವಿಶ್ವನಾಥ ಮುರುಡಿ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಜೆಸ್ಕಾಂ ಶಾಖಾಧಿಕಾರಿ ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net