ಶ್ರಾವಣ ಪೂಜಾ ಕೈಂಕರ್ಯ ಸಂಪನ್ನ

Untitled design 2
ಕನಕಗಿರಿಯ ಹಾಲಪ್ಪಯ್ಯಜ್ಜನ ಮಠದಲ್ಲಿ ಶ್ರಾವಣ ಮಾಸದ ಪೂಜೆಗಳು ಗುರುವಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಕನಕಗಿರಿ: ಪಟ್ಟಣದ 13ನೇ ವಾರ್ಡ್‌ನಲ್ಲಿ ಜೀವಂತ ಐಕ್ಯವಾದ ಪವಾಡ ಪುರುಷ ಹಾಲಪ್ಪಯ್ಯಜ್ಜನ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಸಂಪನ್ನಗೊಂಡವು.

ಶ್ರೀಮಠದಲ್ಲಿ ಶ್ರಾವಣ ನಿಮಿತ್ತ ತಿಂಗಳ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ನೈವೇದ್ಯ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಭಕ್ತರಿಗೆ ಶ್ರೀಮಠದಿಂದ ಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಸೋಮಶೇಖರಯ್ಯಸ್ವಾಮಿ ಪೌರೋಹಿತ್ಯ ವಹಿಸಿದ್ದರು. ಪಪಂ ಉಪಾಧ್ಯಕ್ಷ ಕಂಠಿರಂಗ ನಾಯಕ, ಸದಸ್ಯರಾದ ಅನಿಲ್‌ಕುಮಾರ ಬಿಜ್ಜಳ, ಪ್ರಮುಖರಾದ ಶೇಖರಪ್ಪ ಭಾವಿಕಟ್ಟಿ, ಶಿವಪ್ಪ ಭಾವಿಕಟ್ಟಿ, ಚಂದ್ರಶೇಖರ ಹಡಪದ, ರೇಣುಕಪ್ಪ ತೆಗ್ಗಿನಮನಿ, ಸಂಗಪ್ಪ ತೆಗ್ಗಿನಮನಿ, ಬಾಳಪ್ಪ ತೆಗ್ಗಿನಮನಿ, ಚನ್ನಯ್ಯಸ್ವಾಮಿ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net