ಕೋಚಲಾಪೂರದಲ್ಲಿ ಶ್ರಾವಣ ಭಜನೆ ಮಂಗಲ

KOCHALAPUR
Published on

ನರೇಗಲ್ಲ: ನರೇಗಲ್ಲ ಸಮೀಪದ ಕೋಚಲಾಪೂರ ಗ್ರಾಮದ ಶ್ರೀ ಬನಶಂಕರಿ ಭಜನಾ ಮಂಡಳಿಯ ಆಶ್ರಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಭಜನಾ ಕಾರ್ಯಕ್ರಮವನ್ನು ಇತ್ತೀಚೆಗೆ ಅನ್ನ ಸಂತಸರ್ಪಣೆಯೊಂದಿಗೆ ಮಂಗಲ ಮಾಡಲಾಯಿತು.

ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಶ್ರಾವಣ ಮಾಸವನ್ನು ಪುಣ್ಯದ ಮಾಸವೆಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಕೈಗೊಂಡ ಪೂಜೆ, ವ್ರತ ಮುಂತಾದವುಗಳೆಲ್ಲವೂ ನಿಶ್ಚಿತವಾಗಿ ಫಲ ಕೊಡುತ್ತವೆ ಎಂದರು.

ರೋಟರಿ ಅಧ್ಯಕ್ಷ ಡಾ. ಆರ್.ಕೆ. ಗಚ್ಚಿನಮಠ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿದರು. ಬನಶಂಕರಿ ಭಜನಾ ಮಂಡಳಿ ಸದ್ಯರು, ಡಾ. ಎಲ್.ಎಸ್. ಗೌರಿ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ, ನಿವೃತ್ತ ಶಿಕ್ಷಕ ಆರ್.ಎಸ್. ಮಠ, ವೀರಭದ್ರಪ್ಪ ಕೆರಿಯವರ, ಶೇಖರಗೌಡ ಅಯ್ಯನಗೌಡ್ರ, ಜಗದೀಶ ಹಿರೇಮಠ, ಬಸಯ್ಯ ಮೇಟಿಮಠ, ಅಂದಾನಯ್ಯ ಮಾಲಗಿತ್ತಿಮಠ, ವಿರುಪಾಕ್ಷಯ್ಯ ಮೇಟಿಮಠ, ಸಂಗಯ್ಯ ಮಾಲಗಿತ್ತಿಮಠ, ಮಲ್ಲರಡ್ಡೆಪ್ಪ ರಡ್ಡೇರ, ಶರಣಪ್ಪಗೌಡ ಅಯ್ಯನಗೌಡ್ರ, ಶಂಕರಗೌಡ ಅಯ್ಯನಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net