

ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಮೈಸೂರಿನ ಕಾ.ತ. ಚಿಕ್ಕಣ್ಣ ನೇಮಕವಾಗಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದ್ದು, ಸದಸ್ಯರಾಗಿ ಕಲಬುರಗಿಯ ಮೀನಾಕ್ಷಿ ಬಾಳಿ, ಬೆಂಗಳೂರು ಗ್ರಾಮಾಂತರದ ಎಚ್. ದಂಡಪ್ಪ, ಉಡುಪಿಯ ಕಾತ್ಯಾಯಿನಿ ಕುಂಜಿಬೆಟ್ಟು, ರಾಮನಗರದ ಚಕ್ಕೆರೆ ಶಿವಶಂಕರ್, ಉಡುಪಿಯ ಸಂವರ್ತ ಸಾಹಿಲ್ ಹಾಗೂ ರಾಯಚೂರಿನ ದಸ್ತಗೀರ್ ಸಾಬ್‌ದಿನ್ನಿ ನೇಮಕರಾಗಿದ್ದಾರೆ.
ಈ ನೇಮಕಾತಿ ಮುಂದಿನ ಆದೇಶದವರೆಗೆ ಅಥವಾ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.