

ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲ ದೇವಸ್ಥಾನದ ದಾಸೋಹ ಭವನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಆರು ವರ್ಷ ಕಳೆದಿದೆ. ಸಾರ್ವಜನಿಕರ ಬಳಕೆಗೆ ಇನ್ನೆಷ್ಟು ದಿನ ಬೇಕು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಪುಷ್ಪ ಯಾಗದೊಂದಿಗೆ ಕನಕಾಚಲಪತಿ ಜಾತ್ರೆಗೆ ತೆರೆ
ಕನಕಾಚಲ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಕಟ್ಟಡ ಅವಶ್ಯವಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 2019-20ರ ಬಂಡವಾಳ ವೆಚ್ಚದಲ್ಲಿ ದೇವಸ್ಥಾನ ವ್ಯಾಪ್ತಿಯ ಪ್ರತಾಪರಾಯ (ಆಂಜನೇಯ) ದೇವಸ್ಥಾನದ ಪಕ್ಕದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಕೆಆರ್‌ಐಡಿಎಲ್ ನಿರ್ಮಾಣದ ಜವಾಬ್ದಾರಿ ಪಡೆದುಕೊಂಡಿತ್ತು.
ಕಾಮಗಾರಿ ಆರಂಭವಾದಾಗಿನಿಂದ ಒಂದಿಲ್ಲೊಂದು ಕಾರಣದಿಂದ ಆಗಾಗ ವರ್ಷಗಟ್ಟಲೇ ಕಟ್ಟಡ ಕೆಲಸ ಸ್ಥಗಿತಗೊಳ್ಳುತ್ತಿತ್ತು. ಸಾರ್ವಜನಿಕರ ಒತ್ತಾಯಕ್ಕೆ ಪುನರಾರಂಭವಾಗುತ್ತಿದ್ದ ಕಾಮಗಾರಿ ಮತ್ತೇ ಅದೇ ಸ್ಥಿತಿ ಕಂಡಿದೆ. ಕೊನೆಗೂ 6 ವರ್ಷಗಳ ಬಳಿಕ ಕೆಲ ಸಣ್ಣ ಪುಟ್ಟ ಕೆಲಸಗಳನ್ನು ಹೊರತುಪಡಿಸಿ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಿ ಉದ್ಘಾಟಿಸಿ ಭಕ್ತರ ಬಳಕೆಗೆ ಅನುಕೂಲ ಮಾಡಿಕೊಡಲು ಜನಪ್ರತಿನಿಧಿಗಳು, ಅಧಿಕಾರಿಗಳಾಗಳು ಮುಂದಾಗುತ್ತಿಲ್ಲ.
ಕಾಮಗಾರಿ ಕಳಪೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇನ್ನು 6 ತಿಂಗಳಲ್ಲಿ ನಿರ್ಮಿಸಬಹುದಾದ ಕಟ್ಟಡವನ್ನು ಆಗಾಗ ಬಿಡುವು ನೀಡಿ 6 ವರ್ಷಗಳವರೆಗೆ ನಿರ್ಮಾಣ ಮಾಡಿದ್ದರಿಂದ ಕಟ್ಟಡದ ಗಟ್ಟಿತನದ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.
50 ಜನರಿಗೆ ಸಾಲುವುದಿಲ್ಲ
ದೇವಸ್ಥಾನದ ಎಡಭಾಗದಲ್ಲಿ ನಿರ್ಮಾಣ ಮಾಡಿದ್ದರೆ ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳದೇ ರಾಜಕೀಯ ಹಿತಾಸಕ್ತಿಗೋಸ್ಕರ ದೇವಸ್ಥಾನದ ಆಗ್ನೆಯ ದಿಕ್ಕಿನಲ್ಲಿ ನಿರ್ಮಿಸಿರುವ ಈ ಕಟ್ಟಡ 50 ಜನರಿಗೆ ಸಾಲುವುದಿಲ್ಲ. ಅಮಾವಾಸ್ಯೆ, ಶನಿವಾರ ಹಾಗೂ ಹಬ್ಬ ಹರಿದಿನಗಳಂದು ನೂರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೇಗೆ ಸಾಲುತ್ತದೆ. ಈ ಕಟ್ಟಡ ಇದ್ದರೂ ಇಲ್ಲದಂತಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಸುತ್ತಲೂ ಅನೈರ್ಮಲ್ಯ ಕಟ್ಟಡ ಅಪೂರ್ಣಗೊಂಡಿದ್ದಾಗ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದ ಈ ದಾಸೋಹ ಭವನದ ಕಟ್ಟಡಕ್ಕೆ ಇದೀಗ ನಾನಾ ಕಡೆಗಳಿಂದ ಬರುವ ಭಕ್ತರು ಹಾಗೂ ಸಾರ್ವಜನಿಕರು ಈ ಕಟ್ಟಡದ ಗೋಡೆಗೆ ಹೊಂದಿಕೊಂಡೆ ಮಲಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಅನೈರ್ಮಲ್ಯ ಕಾರಣವಾಗಿದೆ.
ಪ್ರವಾಸೋದ್ಯಮ ಇಲಾಖೆ ಕೊಪ್ಪಳನಾಗರಾಜ ಸಹಾಯಕ ನಿರ್ದೇಶಕಕೆಆರ್‌ಐಡಿಎಲ್ ನಮಗೆ ಹಸ್ತಾಂತರ ಮಾಡಲು ಮುಂದಾಗಿಲ್ಲ. ಹಸ್ತಾಂತರಕ್ಕೆ ಮುಂದಾದರೆ 1 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದ್ದರಿಂದ ಕೇಂದ್ರ ಕಚೇರಿಗೆ ಪತ್ರ ಬರೆದು ಇಂಜಿನಿಯರ್ ಅವರು ನೀಡಿದ ವರದಿ ಮೇಲೆ ಹಸ್ತಾಂತರ ಮಾಡಿಕೊಳ್ಳಲಾಗುವುದು.ಭಕ್ತ ಕನಕಗಿರಿದುರ್ಗಾದಾಸ್ ಯಾದವ್ಪ್ಲಾೃನ್ ಹಾಗೂ ಎಸ್ಟಿಮೇಟ್ ಪ್ರಕಾರ ಭವನ ನಿರ್ಮಾಣವಾಗಿಲ್ಲ. ಭವನಕ್ಕೆ ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸದೇ ಕಾಟಾಚಾರಕ್ಕೆ ಭವನವನ್ನು ಪೂರ್ಣಗೊಳಿಸಲಾಗಿದೆ. ಇದರಿಂದ ಸಂಬಂಧಿಸಿದ ಇಲಾಖೆ ಹ್ಯಾಂಡ್‌ವರ್ ಮಾಡಿಕೊಳ್ಳಲು ಸಿದ್ಧರಿಲ್ಲ ಎನ್ನುವ ಮಾಹಿತಿಯಿದೆ.