ದೈಹಿಕ ಶಿಕ್ಷಣ ಅತ್ಯಗತ್ಯ

Untitled design (29)
ಚಿಕ್ಕಜೋಗಿಹಳ್ಳಿ ಕೇಂದ್ರಿಯ ಜವಹಾರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ಮತ್ತು ಪಾಲಕರ ಸಂವಾದ ಕಾರ್ಯಕ್ರಮದಲ್ಲಿ ಡಾ.ವಿರೂಪಾಕ್ಷಿ ದೇವರಮನಿ, ಪ್ರಾಚಾರ್ಯ ಸುದೇಶ ಗೋಪಾಲ್ ಮಲಾಜುರೆ, ಡಾ.ಕಲ್ಲೇಶ್ ಪಾಟೇಲ್, ಶರಣಬಸವ,, ಡಾ.ರಾಜಶೇಖರ ಇದ್ದರು.
Published on

ಕಾನಹೊಸಹಳ್ಳಿ: ವಿದ್ಯಾರ್ಥಿಗಳು ಕಲಿಕೆ ಜತೆಯಲ್ಲಿ ದಿನ ನಿತ್ಯ ಯೋಗ್ಯಾಭ್ಯಾಸ ರೂಢಿಸಿಕೊಂಡಾಗ ಮಾನಸಿಕ ಶಕ್ತಿ ಹಾಗೂ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದು ಎಬಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮಾನಸಿಕ ತಜ್ಞ ವಿರೂಪಾಕ್ಷಿ ದೇವರಮನಿ ತಿಳಿಸಿದರು.

ದಿನ ನಿತ್ಯ ಯೋಗ್ಯಾಭ್ಯಾಸ ರೂಢಿಸಿಕೊಳ್ಳಿ

ಚಿಕ್ಕಜೋಗಿಹಳ್ಳಿ ಕೇಂದ್ರಿಯ ಜವಹಾರ್ ನವೋದಯ ವಿದ್ಯಾಲಯದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಪಾಲಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗುವಿನ ಬೆಳವಣಿಗೆಯಲ್ಲಿ ಪರಿಸರ ಪಾತ್ರ ನಿರ್ಣಾಯಕವಾಗಿರುತ್ತದೆ. ಪಠ್ಯದ ಜತೆಗೆ ದೈಹಿಕ ಶಿಕ್ಷಣ ಮುಖ್ಯವಾಗಿರುತ್ತದೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಸಧೃಡತೆಗಾಗಿ ಆದ್ಯತೆ ನೀಡಬೇಕು ಎಂದರು.

ಪ್ರಾಚಾರ್ಯ ಸುದೇಶ್ ಗೋಪಾಲ್ ಮಲಾಜುರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ ಎಂದರು. ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಎಂ.ಶರಣಬಸವ, ಡಾ.ಕಲ್ಲೇಶ್ ಪಾಟೇಲ್, ಡಾ.ಮನೋಹರಗೌಡ, ರಮೇಶ್, ಡಾ.ರಾಜಶೇಖರ್, ವಿಜಯಕುಮಾರ್, ನೀಲಕಂಠಚಾರಿ, ಪಿ.ನಾಗರಾಜ್, ಸುನೀಲ್ ಕುಮಾರ್, ನವೀನ್ ಕುಮಾರ್ ವೈ.ಎಂ, ಚೈತ್ರಾ, ಗಾಳಿ ಉದಯ, ತ್ರಿಶೂಲ್, ಲೋಹ ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net