

ಚಿತ್ರದುರ್ಗ: ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ನಮ್ಮ ಜಿಲ್ಲೆ ಕ್ರೀಡಾಪಟುಗಳು ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದಾರೆಂದು ಜಿಲ್ಲಾ ಹ್ಯಾಂಡ್‌ಬಾ ಲ್ ಸಂಸ್ಥೆ ಕಾರ್ಯಾಧ್ಯಕ್ಷ ಕೆ.ಎಚ್.ಶಿವರಾಮ್ ಹೇಳಿದರು.
ಜ.9ರಿಂದ 13ರವರೆಗೆ ರಾಜಸ್ಥಾನದಲ್ಲಿ ನಡೆಯುವ 20 ವರ್ಷದೊಳಗಿನ ಬಾಲಕರ ವಿಭಾಗದ 46ನೇ ರಾಷ್ಟ್ರೀಯ ಹ್ಯಾಂಡ್‌ಬಾಲ್‌ನ ಲ್ಲಿ ಭಾಗವಹಿಸುತ್ತಿರುವ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆ ಕ್ರೀಡಾಪಟುಗಳಿಗೆ,ನಗರದ ವಿಪಿಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಕಳೆದ 23 ವರ್ಷಗಳ ಹಿಂದೆ ಸಂಸ್ಥೆ ಸ್ಥಾಪನೆ ನಂತರದಲ್ಲಿ 450ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಜ್ಯ,ರಾಷ್ಟ್ರ ಮಟ್ಟವನ್ನು ಪ್ರತಿ ನಿಧಿಸಿದ್ದಾರೆ. ಇವರಲ್ಲಿ ಹಲವರು ನೇರವಾಗಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. 50ಕ್ಕೂ ಹೆಚ್ಚು ಜನ ವೈದ್ಯಕೀಯ ಕೋರ್ಸ್ ಪ್ರವೇಶ ಪ ಡೆದಿದ್ದಾರೆ. 60ಕ್ಕೂ ಹೆಚ್ಚು ಕ್ರೀಡಾಪಟುಗಳು ಸರ್ಕಾರದಿಂದ ತಲಾ ಒಂದು ಲಕ್ಷ ರೂ. ಸಹಾಯಧನ ಪಡೆದಿದ್ದಾರೆ ಎಂದರು.
ಸಂಸ್ಥೆ ಉಪಾಧ್ಯಕ್ಷ ಎಂ.ಎಚ್.ಜಯಣ್ಣ ಮಾತನಾಡಿ, ಈ ಕಾರ್ಯಕ್ರಮ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವಂತದ್ದಾಗಿದೆ ಎಂದ ರು.
ಸಂಸ್ಥೆ ಖಜಾಂಚಿ ಸಿ.ಎಸ್.ಪ್ರೇಮಾನಂದ್, ಮುಖ್ಯಶಿಕ್ಷಕ ಸುರೇಶ್ ಮಾತನಾಡಿದರು. ಶ್ರೀ ನಗರದಲ್ಲಿ ನಡೆದ ರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ಪ್ರಸುತ್ತ ಅಖಿಲ ಭಾರತ ವಿಶ್ವ ವಿದ್ಯಾಲಯದ ಹ್ಯಾಂಡ್‌ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಸಾವಂತ್‌ಹಿಮಗಿರಿ ಹಾಗೂ ರಾಜಸ್ಥಾನದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಇ.ಕುಮಾರ್ ಮತ್ತು ವಿ.ಶ್ರೀನಿವಾಸ್ ಅವರನ್ನು ಸನ್ಮಾ ನಿಸಿ,ಬೀಳ್ಕೊಡಲಾಯಿತು.