ಕಂಪ್ಲಿ ಅನಧಿಕೃತ ಪೈಪ್‌ಗಳ ತೆರವು

Kampli JCB
ಕಂಪ್ಲಿ ಹೊರ ವಲಯದ ಎಂ.1 ವಿತರಣಾ ನಾಲೆಯ ಮೇಲಿನ ಭಾಗದಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಪೈಪ್‌ಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.
Published on

ಕಂಪ್ಲಿ: ತಾಲೂಕಿನ ಎಂ.1 ವಿತರಣಾ ನಾಲೆಗೆ ಅಕ್ರಮವಾಗಿ ಅಳವಡಿಸಿದ್ದ ಪೈಪ್‌ಗಳನ್ನು ನಂ.1 ಉಪ ನೀರಾವರಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.
ಈ ಕುರಿತು ಶಂಕರ್‌ಸಿಂಗ್ ಕ್ಯಾಂಪಿನ ರೈತರು ಆ.26ರಂದು ಶಾಸಕರ ಗಮನಕ್ಕೆ ತಂದಿದ್ದರು. ಹೀಗಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ನೀರಾವರಿ ಇಲಾಖೆ ಎಇಇ ಎ.ಶ್ರೀನಿವಾಸ್ ಮಾತನಾಡಿ, ಎಂ.1 ವಿತರಣಾ ನಾಲೆ ಮೇಲ್ಭಾಗದ ದೇವಸಮುದ್ರ, ಕಂಪ್ಲಿ ಕೊಟ್ಟಾಲ್ ಹಾಗೂ ಶಂಕರ್‌ಸಿಂಗ್ ಕ್ಯಾಂಪಿನ ಹತ್ತಿರ ಅನಧಿಕೃತವಾಗಿ ಅಳವಡಿಸಿದ್ದ 18 ಪೈಪ್‌ಗಳನ್ನು ತೆರವುಗೊಳಿಸಲಾಗಿದೆ.

ನಾಲೆೆಗೆ 45 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕೊನೇ ಅಂಚಿನ ಭೂಮಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net