More

    ಹೇಮೆ ನಾಲೆಗೆ ಅಳವಡಿಸಿದ್ದ ಪೈಪ್‌ಗಳ ತೆರವು ; ಅಜ್ಜೇನಹಳ್ಳಿ ಕೆರೆಗೆ ನೀರು ಹರಿಸಲು ಗ್ರಾಮಸ್ಥರ ಪಟ್ಟು

    ಶಿರಾ : ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಯುತ್ತಿದ್ದ ಚಾನಲ್‌ಗೆ ಅಡ್ಡಗೋಡೆ ಕಟ್ಟಿಕೊಂಡು ಅಜ್ಜೇನಹಳ್ಳಿ ಕೆರೆಗೆ ನೀರು ಹರಿಸಿಕೊಳ್ಳಲು ಅಳವಡಿಸಿದ್ದ ಪೈಪ್‌ಗಳನ್ನು ಬುಧವಾರ ಬೆಳಗ್ಗೆ ಪೊಲೀಸರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತೆರವುಗೊಳಿಸಿದರು.

    ಅಜ್ಜೇನಹಳ್ಳಿ ಕೆರೆಗೆ ಸುಮಾರು ಮೂರು ದಿನಗಳಿಂದ ನೀರು ಹರಿಸಿಕೊಳ್ಳಲಾಗುತ್ತಿತ್ತು. ಹೀಗಾಗಿ ಕಳ್ಳಂಬೆಳ್ಳದಿಂದ ಮದಲೂರು ಕೆರೆಗೆ ಹರಿಯುತ್ತಿದ್ದ ನೀರು ನಿಲ್ಲಿಸಲಾಗಿದೆ. ಈ ಮಧ್ಯೆ ಕೆರೆಗೆ ಹೇಮಾವತಿ ನೀರು ಹರಿಸಬೇಕು ಎಂದು ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಶಾಸಕ ಡಾ.ರಾಜೇಶ್‌ಗೌಡಗೆ ಅಜ್ಜೇನಹಳ್ಳಿಯ ನೂರಾರು ರೈತರು ಮನವಿ ಸಲ್ಲಿಸಿದ್ದರು.

    ಮದಲೂರು ಕೆರೆಗೆ ಹರಿಯುತ್ತಿರುವ ಹೇಮಾವತಿ ನೀರನ್ನು ಪೈಪ್‌ಗಳನ್ನು ಹಾಕಿಕೊಂಡು ಕೆರೆಗೆ ಹರಿಸುತ್ತಿದ್ದೇವೆ. ಆದರೆ ತಹಸೀಲ್ದಾರ್ ಪೈಪ್‌ಗಳನ್ನು ತೆರವುಗೊಳಿಸಬೇಕು ಎಂದು ಸ್ಥಳಕ್ಕೆ ಬಂದು ತಿಳಿಸಿದ್ದಾರೆ. ಈ ವರ್ಷ ಮಳೆ ಸರಿಯಾಗಿ ಬಾರದ ಕಾರಣ ಕೆರೆ-ಕುಂಟೆಗಳಲ್ಲಿ ಹನಿ ನೀರಿಲ್ಲ. ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವವಿದ್ದು, ಕೆರೆಗೆ ಕನಿಷ್ಠ ಒಂದು ವಾರವಾದರೂ ನೀರು ಹರಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ್ದರು.

    ಶಾಸಕ ಡಾ.ರಾಜೇಶ್‌ಗೌಡ ತಾಲೂಕಿಗಿರುವ ಅಲೋಕೇಷನ್ ಹಾಗೂ ತಾಂತ್ರಿಕ ವಿಚಾರಗಳ ಬಗ್ಗೆ ರೈತರಿಗೆ ವಿವರವಾಗಿ ತಿಳಿಸಿ ಮನವೊಲಿಸಲು ಪ್ರಯತ್ನಪಟ್ಟರು. ಆದರೆ ರೈತರು ಪಟ್ಟುಬಿಡದೆ ಕನಿಷ್ಠ ಒಂದು ವಾರವಾದರೂ ಕೆರೆಗೆ ನೀರು ಬಿಡಿ ಎಂದು ಒತ್ತಾಯ ಮಾಡಿದಾಗ ಇದರ ಬಗ್ಗೆ ಸಮಯಾವಾಕಾಶ ಕೊಡಿ ಯಾವುದನ್ನೂ ತಿಳಿಸುತ್ತೇನೆ ಎಂದು ರೈತರಿಗೆ ತಿಳಿಸಿದ್ದರು. ತಹಸೀಲ್ದಾರ್ ಮಮತಾ, ಇಒ ಲಕ್ಷ್ಮಣ್, ನಗರಸಭೆ ಆಯುಕ್ತ ಪರಮೇಶ್ವರಪ್ಪ ಇದ್ದರು. ಈ ನಡುವೆ ಬುಧವಾರ ಪೈಪ್‌ಗಳನ್ನು ತೆರವುಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts