More

    ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನ

    ಬಾಗಲಕೋಟೆ: ಕೇಂದ್ರ ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿ ಜತೆಗೆ ಧಾರ್ಮಿಕತೆಯ ಪುನರುತ್ಥಾನ ಮಾಡಿದ್ದು ಮೋದಿ. ಹಿಂದು ಧರ್ಮ ಪುನರುತ್ಥಾನಕ್ಕೆ ಮೋದಿ ಅವಶ್ಯ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಬೆನಕಟ್ಟಿ ಗ್ರಾಮದಲ್ಲಿ ಗುರುವಾರ ಬಿಜೆಪಿಯಿಂದ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

    ಬಾಬಾಸಾಹೇಬ್ ಅಂಬೇಡ್ಕರ್ ಸ್ಮರಣಾರ್ಥ 5 ಸ್ಥಳಗಳನ್ನು ಪಂಚತೀರ್ಥಗಳಾಗಿ ಅಭಿವದ್ಧಿ, ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಮತ್ತು ಉಜ್ಜಯಿನಿ ಮಹಾಕಾಲ ಕಾರಿಡಾರ್‌ಗಳ ಮೂಲಕ ಮಂದಿರ ಪ್ರದೇಶಗಳ ಅಭಿವೃದ್ಧಿ, ಕೇದಾರ-ಉತ್ತರಾಖಂಡ ಪ್ರಮುಖ ದೇವಾಲಯಗಳನ್ನು ಸಂಪರ್ಕಿಸಲು ಸರ್ವಋತು ರಸ್ತೆ ನಿರ್ಮಾಣ, ಭಾರತ ಕಲೆ ಸಂಸ್ಕೃತಿ ಪುನರ್ಸ್ಥಾಪಿಸಲು ವಿದೇಶಗಳಿಂದ ನಮ್ಮ ದೇಶದ 231 ಕಲಾಕತಿಗಳ ವಾಪಸ್ ಪಡೆಯಲಾಗಿದೆ. ಅಮೆರಿಕದಿಂದ 157 ಪುರಾತನ ಕಲಾಕತಿಗಳು, ಆಸ್ಟ್ರೇಲಿಯಾದಿಂದ 40 ಕಲಾಕತಿ ವಾಪಸ್ ತರುವಲ್ಲಿ ಯಶಸ್ವಿಯಾಗಿದ್ದಾರೆ.

    ಪಂಜಾಬ್ ಗುರುದಾಸ್‌ಪುರ ಜಿಲ್ಲೆಯಲ್ಲಿರುವ ದೇರಾ ಬಾಬಾನಾನಕ್ ಸಾಹಿಬ್, ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರ ಸಂಪರ್ಕಿಸುವ 4.7 ಕಿ.ಮೀ ಉದ್ದದ ರಸ್ತೆ ಭಕ್ತರ ಪ್ರಯಾಣಕ್ಕೆ ಮುಕ್ತವಾಗಿದೆ. ಅಲ್ಲದೆ, ಸರ್ದಾರ ಪಟೇಲರ ಗೌರವಾರ್ಥ ಏಕತಾ ಪ್ರತಿಮೆ ನಿರ್ಮಾಣ, ಸ್ವಾತಂತ್ರೃ ಹೋರಾಟಗಾರರ ಗೌರವಾರ್ಥ ಕ್ರಾಂತಿ ಮಂದಿರ ನಿರ್ಮಾಣ, ಬಿಲಿಯನ್ ವಾಲಾಬಾಗ್ ಸ್ಮಾರಕ ನವೀಕರಣ, ಇಂಡಿಯಾ ಗೇಟ್ ಬಳಿ ಕರ್ತವ್ಯ ಪಥ ಮತ್ತು ಸುಭಾಷ ಚಂದ್ರ ಬೋಸ್ ಪ್ರತಿಮೆ ಅನಾವರಣ, ಕೋಟ್ಯಂತರ ಭಾರತೀಯರ ಕನಸಾಗಿದ್ದ ರಾಮ ಮಂದಿರ ನಿರ್ಮಾಗೊಂಡು ಉದ್ಘಾಟನೆಯಾಗಿದೆ ಎಂದರು.

    ಮುಖಂಡರಾದ ಸರಗಣಾಚಾರಿ, ಸಂಗಣ್ಣ ಹಡಗಲಿ, ಸುರೇಶ ಕೊಣ್ಣೂರ, ಮಂಜು ಗೌಡರ, ವೇಮಣ್ಣ ಯಡಹಳ್ಳಿ, ರವಿ ಅರಷಿನಗುಡಿ, ಭೀಮಶಿ ಕಿಲಬನೂರ, ಹನಮಂತಗೌಡ ದಾಸಪ್ಪನವರ, ರವಿ ಬೆಣ್ಣೂರ, ರಮೇಶ ತೆಗ್ಗಿ, ಪಾಂಡುರಂಗ ಕಟಗೇರಿ, ಮಹಾಂತೇಶ ಚಲವಾದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts