ಪೊಲೀಸರಿಂದ ಆಗುವ ತೊಂದರೆ ನಿವಾರಿಸಿ

Untitled design (13)
ಕಂಪ್ಲಿ ಅಂಬೇಡ್ಕರ್ ವೃತ್ತದಲ್ಲಿ ತಹಸೀಲ್ದಾರ್ ಶಿವರಾಜಗೆ ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾನಾ ವಾಹನಗಳ ಚಾಲಕ, ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶರ್ಮಸ್ ವಲಿ, ಸಂಘಟನೆಗಳ ಪದಾಧಿಕಾರಿಗಳಾದ ಗುರುಸ್ವಾಮಿ, ಮಹೇಶನಾಯಕ, ಆಟೋ ರಾಘು, ಖಾಜಾ, ವೆಂಕಟೇಶ, ಉಮೇಶ, ಅಮರಯ್ಯಸ್ವಾಮಿ, ಗೌಸ್‌ಪೀರ್ ಇದ್ದರು.
Published on

ಕಂಪ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಶಿವರಾಜಗೆ ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾನಾ ವಾಹನಗಳ ಚಾಲಕ, ಮಾಲೀಕರ ಸಂಘಗಳ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದವು.

7 ಲಕ್ಷ ರೂಪಾಯಿ ಜುಲ್ಮಾನೆ ಮತ್ತು 10 ವರ್ಷ ಜೈಲು ಶಿಕ್ಷೆ ರದ್ದುಗೊಳಿಸಿ

ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶರ್ಮಸ್ ವಲಿ ಮಾತನಾಡಿ, ರಾಜ್ಯದ ಗಡಿ ಭಾಗಗಳಲ್ಲಿರುವ ಸಾರಿಗೆ ಇಲಾಖೆಯ ಎಲ್ಲ ತಪಾಸಣೆ ಠಾಣೆಗಳನ್ನು ತೆಗೆದುಹಾಕಬೇಕು. ಮಿತಿ ಮೀರಿದ ಅಳತೆಗೆ ವಿಧಿಸುತ್ತಿರುವ 7 ಲಕ್ಷ ರೂಪಾಯಿ ಜುಲ್ಮಾನೆ ಮತ್ತು 10 ವರ್ಷ ಜೈಲು ಶಿಕ್ಷೆ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಕಪ್ಪು ಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಎಫ್‌ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಬೇಕು. ಡಿಎಸ್‌ಎ ಪ್ರಕರಣಗಳು ಎಲ್ಲೇ ದಾಖಲಾಗಿದ್ದರೂ ಅದನ್ನು ವಾಹನ ಮಾಲೀಕರು ಮೂಲ ಕಚೇರಿಯಲ್ಲೇ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡಬೇಕು. ಗಂಗಾವತಿ ಬಳಿ ಇರುವ ಟೋಲ್ ಹತ್ತಿರ ಪೊಲೀಸರು ಲಾರಿಗಳನ್ನು ನಿಲ್ಲಿಸಿ ತೊಂದರೆ ಕೊಡುವುದನ್ನು ನಿವಾರಿಸಬೇಕು. ಗಂಗಾವತಿಯಿಂದ 40 ಕಿ.ಮೀ. ಒಳಗೆ ಮರಳಿ, ಹೇಮಗುಡ್ಡ, ಶಹಪುರ, ಹಿಟ್ನಾಳ ನಾಲ್ಕು ಟೋಲ್‌ಗಳಿದ್ದು ಸ್ಥಳೀಯ ಲಾರಿಗಳಿಗೆ ಇವುಗಳಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net