ಶಾಲೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ

Kampli Mla
ದೇವಸಮುದ್ರ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶಾಸಕ ಜೆ.ಎನ್.ಗಣೇಶ್ ,ಮಕ್ಕಳಿಗೆ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆಹಣ್ಣು ತಿನ್ನಿಸುವ ಮೂಲಕ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖರಾದ ನಾಯ್ಕರ ಮಾಯಮ್ಮ, ವಿ.ವೆಂಕಟೇಶ್, ಕೆ.ಶ್ರೀನಿವಾಸರಾವ್, ಕೆ.ಷಣ್ಮುಖಪ್ಪ, ಎಚ್.ದೊಡ್ಡಬಸಪ್ಪ ಇತರರಿದ್ದಾರೆ.
Published on

ಕಂಪ್ಲಿ: ಬೋಧನೆಯೊಂದಿಗೆ ಮಕ್ಕಳ ಆರೋಗ್ಯ ಸಂರಕ್ಷಣೆ ಬಗ್ಗೆಯೂ ಶಿಕ್ಷಕರು ಕಾಳಜಿವಹಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ದೇವಸಮುದ್ರ ಗ್ರಾಮದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಶನಿವಾರ ಪೂರಕ ಪೌಷ್ಟಿಕ ಅಹಾರ ಕಾರ್ಯಕ್ರಮದಡಿ ಮಕ್ಕಳಿಗೆ ಮೊಟ್ಟೆ, ಶೇಂಗಾಚಿಕ್ಕಿ ಮತ್ತು ಬಾಳೆಹಣ್ಣು ವಿತರಿಸಿ ಮಾತನಾಡಿದರು. ಶಾಲೆಗೆ ಅಗತ್ಯ ಸೌಕರ್ಯ ಒದಗಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಶಾಲೆಯಲ್ಲಿ 672 ಮಕ್ಕಳು ಓದುತ್ತಿದ್ದು, ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಕೊಠಡಿಗಳ ದುರಸ್ತಿ, ಹೊಸದಾಗಿ 4 ಕೊಠಡಿಗಳ ನಿರ್ಮಾಣ, ಬಿಸಿಯೂಟಕ್ಕೆ 700 ತಟ್ಟೆ-ಲೋಟ, ಶೌಚಗೃಹ ನಿರ್ಮಾಣ, ಕ್ರೀಡಾ ಸಾಮಗ್ರಿ ಒದಗಿಸುವಂತೆ ಮುಖ್ಯಶಿಕ್ಷಕ ಎಚ್.ದೊಡ್ಡಬಸಪ್ಪ, ಶಾಸಕರಿಗೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ನಾಯ್ಕರ ಮಾಯಮ್ಮ, ಎಸ್ಡಿಎಂಸಿ ಅಧ್ಯಕ್ಷ ವಿ.ವೆಂಕಟೇಶ್, ಇಸಿಒ ಎಸ್.ಈರೇಶ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಕೆ.ಷಣ್ಮುಖಪ್ಪ, ಎಂ.ಹನುಮಂತಪ್ಪ, ಸುಗ್ಗೇನಹಳ್ಳಿ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net