

ಕಂಪ್ಲಿ: ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ನಿವೇದಿತಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಹಯೋಗದಲ್ಲಿ 2023-24ನೇ ಸಾಲಿನ ವಲಯಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಮಂಗಳವಾರ ಆರಂಭಗೊಂಡಿತು.
ಶಾಸಕ ಜೆ.ಎನ್.ಗಣೇಶ್ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಕ್ರೀಡಾಕೂಟದ ಅಧ್ಯಕ್ಷ ಎ.ಎಂ.ಬಸವರಾಜ ಮಾತನಾಡಿ, 27ಪ್ರೌಢಶಾಲೆಗಳ ಮಕ್ಕಳು 5 ಗುಂಪು ಆಟ ಹಾಗೂ 15 ವೈಯಕ್ತಿಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 21ದೈಹಿಕ ಶಿಕ್ಷಕರು ಕ್ರೀಡಾಕೂಟದಲ್ಲಿ ಸೇವಾನಿರತರಾಗಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟದ ಕಾರ್ಯದರ್ಶಿ ಡಿ.ಹುಲಿಕುಂಟಾಚಾರ್, ಸಂಘಟಕ ಮರಿಯಪ್ಪ, ತಾಲೂಕು ದೈಹಿಕ ಪರಿವೀಕ್ಷಕ ಶ್ರೀಕಾಂತ್ ವಾಲ್ಮೀಕಿ, ಶಿಕ್ಷಕ ಸಂಘಟನೆ ಅಧ್ಯಕ್ಷರಾದ ಟಿ.ಎಂ.ಬಸವರಾಜ, ಹನುಮಂತಪ್ಪ, ಎಚ್.ದೊಡ್ಡಬಸಪ್ಪ, ಹೊಸಪೇಟೆಯ ಶೇಖರ್ ಗಿರಡ್ಡಿ, ದೈಹಿಕ ಶಿಕ್ಷಕರಾದ ವಿಷ್ಣು, ಬಿಂಗಿ ಬೀರಲಿಂಗ, ಪಟ್ಟಣದ ಮುಖಂಡರು, ದೈಹಿಕ ಶಿಕ್ಷಕರು ಹಾಗೂ ಶಿಕ್ಷಕರಿದ್ದರು.