ಕಂಪ್ಲಿ ಸಾಂಗತ್ರಯ ಪಾಠಶಾಲೆಗೆ ಪಡಿತರ ಒದಗಿಸಲು ಮನವಿ

Kampli Sangatraya School Saraswati Homa
ಕಂಪ್ಲಿಯ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣಾರ್ಥ ಸರಸ್ವತಿ ಹೋಮ ಜರುಗಿತು.
Published on

ಕಂಪ್ಲಿ: ಎರಡು ಶತಮಾನಗಳ ಇತಿಹಾಸ ಹೊಂದಿದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳ ಅನ್ನ ದಾಸೋಹಕ್ಕಾಗಿ ಕಾಯಂ ಪಡಿತರ ವ್ಯವಸ್ಥೆಗೆ ಶಾಸಕರು ಮುಂದಾಗಬೇಕು ಎಂದು ಪಾಠಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎಸ್.ಎಂ.ಚನ್ನಬಸವರಾಜಸ್ವಾಮಿ ಒತ್ತಾಯಿಸಿದರು.

ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಪ್ರಸಕ್ತ ಸಾಲಿನ ವೈದಿಕ, ಜ್ಯೋತಿಷ, ಸಂಸ್ಕೃತ ವೇದ ಅಧ್ಯಯನ ತರಗತಿ ಆರಂಭ ನಿಮಿತ್ತ ಶುಕ್ರವಾರ ಸರಸ್ವತಿ ಹೋಮ ಕಾರ್ಯಕ್ರಮದಲ್ಲಿ ಶಾಸಕ ಜೆ.ಎನ್.ಗಣೇಶಗೆ ಮನವಿ ಸಲ್ಲಿಸಿ ಮಾತನಾಡಿದರು.

ಸಾಂಗತ್ರಯ ಸಂಸ್ಕೃತ ಪಾಠಶಾಲೆಯು ರಾಜ್ಯದಲ್ಲಿಯೇ ಪ್ರಾಚೀನ ವೇದ ಅಧ್ಯಯನ ಪಾಠಶಾಲೆಗಳಲ್ಲಿ ಒಂದಾಗಿದ್ದು, ರಾಜ್ಯದ ನಾನಾ ಕಡೆಗಳಿಂದ ವೇದಾಭ್ಯಾಸಕ್ಕಾಗಿ ಜಂಗಮ ವಿದ್ಯಾರ್ಥಿಗಳು ಆಗಮಿಸುತ್ತಾರೆ. ವಿದ್ಯಾರ್ಥಿಗಳ ಊಟೋಪಚಾರಕ್ಕೆ ಪಡಿತರ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದರು.

ಪ್ರಾಚಾರ್ಯ ಘನಮಠದಯ್ಯ ಹಿರೇಮಠ ಮಾತನಾಡಿ, ವೈದಿಕ ಶಾಸ್ತ್ರಗಳಲ್ಲಿ ವೈಜ್ಞಾನಿಕ ಮಹತ್ವವಿದ್ದು ಅರಿತು ಅಳವಡಿಸಿಕೊಂಡಲ್ಲಿ ಸಾರ್ಥಕ ಜೀವನ ಸಾಗಿಸಲು ಸಾಧ್ಯ ಎಂದರು.

ಪ್ರಮುಖರಾದ ಡಾ.ಜಗನ್ನಾಥ ಹಿರೇಮಠ, ಕಲ್ಯಾಣಿಚೌಕಿಮಠದ ಬಸವರಾಜಶಾಸ್ತ್ರಿ, ಕಲ್ಗುಡಿ ವಿಶ್ವನಾಥ, ಜವುಕಿನ ಶಂಕರ್, ವೀರಯ್ಯಸ್ವಾಮಿ ಸಾಲಿಮಠ, ಮುಕ್ಕುಂದಿ ಶಿವಗಂಗಮ್ಮ, ಬಿ.ಎಂ.ಪುಷ್ಪಾ, ಮುಕ್ಕುಂದಿ ಮಮತಾ ತಿಪ್ಪೇಸ್ವಾಮಿ, ಕಲ್ಗುಡಿ ನಾಗರತ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net