ಕಂಪ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜುನಾಯಕ ನಾಮಪತ್ರ ಸಲ್ಲಿಕೆ

Kampli JDS Nominatioin
ಕಂಪ್ಲಿಯಲ್ಲಿ ಜೆಡಿಎಸ್ ಅಭ್ಯರ್ಥಿ ರಾಜುನಾಯಕ ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಸಾಗಿದರು.
Published on

ಕಂಪ್ಲಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswami) ಭರವಸೆ ನಾಯಕರಾಗಿದ್ದು 120ಸ್ಥಾನಗಳಲ್ಲಿ ಜೆಡಿಎಸ್ ಜಯಸಾಧಿಸಲಿದೆ ಎಂದು
ಎಂಎಲ್‌ಸಿ ಟಿ.ಎ.ಶರವಣ (MLC T.C. Sharavana) ಹೇಳಿದರು.

ಜೆಡಿಎಸ್ ಅಭ್ಯರ್ಥಿ ರಾಜಪ್ಪ ಚುನಾವಣಾಧಿಕಾರಿಗೆ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದರು. ಕಾಂಗ್ರೆಸ್, ಬಿಜೆಪಿ ತೊರೆದ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿಯಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ (JDS) ಪ್ರಾಬಲ್ಯ ಸಾಧಿಸುತ್ತಿದೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ಗ್ಯಾರಂಟಿಯೇ ಇಲ್ಲ

ಜೆಡಿಎಸ್ ಅಭ್ಯರ್ಥಿ ರಾಜುನಾಯಕ ಮಾತನಾಡಿ, ಕಂಪ್ಲಿ ಕ್ಷೇತ್ರವು ಅಭಿವೃದ್ಧಿವಂಚಿತವಾಗಿದ್ದು, ಇನ್ನೂ ಮಹಿಳೆಯರು ಬಯಲು ಶೌಚವನ್ನೇ ಅವಲಂಬಿಸಿದ್ದಾರೆ. ಎಚ್‌ಡಿಕೆ ಮಾಡಿದ ಸಾಲ ಮನ್ನಾದ ಋಣ ತೀರಿಸಲು ರೈತರು ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ಗ್ಯಾರಂಟಿಯೇ ಇಲ್ಲ ಎಂದು ವ್ಯಂಗ್ಯವಾಡಿದರು.

ನಾಮಪತ್ರವನ್ನು ಚುನಾವಣಾಧಿಕಾರಿ ಡಾ.ನಯನಾಗೆ ಸಲ್ಲಿಸಿದರು. ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ದೀಪಾಶ್ರೀನಾಯಕ, ಅಯ್ಯೋದಿ ಹರೀಶ್, ರುಕ್ಮಿಣಿ ಕೃಷ್ಣನಾಯಕ ಇತರರಿದ್ದರು.

ರಾರಾಜಿಸಿದ ಜೆಡಿಎಸ್ ಧ್ವಜಗಳು

ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಜೋಡೆತ್ತಿನ ಬಂಡಿ, ಪಂಚರತ್ನ ರಥದಲ್ಲಿ ಮೆರವಣಿಗೆ ಮೂಲಕ ಬಂದರು. ಕನ್ನಡ ಧ್ವಜ, ಜೆಡಿಎಸ್ ಧ್ವಜಗಳು ರಾರಾಜಿಸಿದವು. ಮೆರವಣಿಗೆಯಲ್ಲಿ ಪ್ರಮುಖರಾದ ಬಿ.ಅಂಬಣ್ಣ, ಜಗದೀಶ್ ಪೂಜಾರ್, ಹೇಮರೆಡ್ಡಿ, ವಿಶ್ವನಾಥಸ್ವಾಮಿ, ನಾರಾಯಣರೆಡ್ಡಿ, ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net