

ಕಂಪ್ಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.10ರಿಂದ ಮೂರು ದಿನ ಮೈಸೂರಿನಲ್ಲಿ ರಾಜ್ಯಮಟ್ಟದ ಮೂರನೇ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಗುಂಡಯ್ಯಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸಂಘದ ತಾಲೂಕು ಘಟಕ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ನೈಸರ್ಗಿಕ ವಿಕೋಪ, ನೆರೆ ಹಾವಳಿ ಸಂದರ್ಭಗಳಲ್ಲಿ ಶಾಮಿಯಾನ, ಬೆಳಕಿನ ಪರಿಕರಗಳು ಹಾಳಾದಲ್ಲಿ ಸರ್ಕಾರ ನಷ್ಟ ಪರಿಹಾರ ಕೊಡಬೇಕು. ಶಾಮಿಯಾನ, ಡೆಕೋರೇಷನ್, ಧ್ವನಿಬೆಳಕು ಸೇವೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಬೇಕು. ಶಾಮಿಯಾನ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರಿಗೆ ನೀಡುವ ಎಲ್ಲ ಸೌಲಭ್ಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮ ಪರ ಜನಪ್ರತಿನಿಧಿಗಳು ಧ್ವನಿ ಎತ್ತಲಿ
ಸಂಘದ ಜಿಲ್ಲಾಧ್ಯಕ್ಷ ಎಚ್.ನಾಗರಾಜ ಮಾತನಾಡಿ, ರಾಜ್ಯ ಮಹಾಧಿವೇಶನದಲ್ಲಿ ಜಿಲ್ಲೆಯ ಡೆಕೋರೇಟರ್ಸ್ ಮಾಲೀಕರು, ಕಾರ್ಮಿಕರು ಪಾಲ್ಗೊಳ್ಳಬೇಕು ಎಂದರು. ರಾಜ್ಯ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಕೆ.ಬಿ.ಎನ್.ರಾಜಾಸಾಬ್ ಅಧ್ಯಕ್ಷತೆವಹಿಸಿದ್ದರು. ಪದಾಧಿಕಾರಿಗಳಾದ ಬಿ.ಶೇಷಯ್ಯ, ಮೌಲಾಲಿ, ಡಿ.ಈರಣ್ಣ, ಎಸ್.ನಾಗರಾಜಸ್ವಾಮಿ, ಎಚ್.ಎಸ್.ಇಮ್ತಿಯಾಜ್, ರಾಘವೇಂದ್ರ, ತೋಟಪ್ಪಾಚಾರಿ, ಎಂ.ನಾಗರಾಜ, ಲೋಕೇಶ್, ಎಂ.ಮಾಬುಸಾಬ್, ಹನುಮೇಶ್, ಬಿ.ದುರುಗೇಶ್ ಇತರರಿದ್ದರು.