ಸಮೃದ್ಧ ಮಳೆ-ಬೆಳೆಗಾಗಿ ಗಿರಿಜಾ ಕಲ್ಯಾಣ

kampli giriraja kalyana
ಕಂಪ್ಲಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಲಕ್ಷ ಶಂಭುಲಿಂಗ ಮಹಾಯಜ್ಞ, 2ಕೋಟಿ ಪಂಚಾಕ್ಷರಿ ಮಂತ್ರ ಜಪ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ ಸೋಮವಾರ ಜರುಗಿದವು. ಪ್ರಮುಖರಾದ ಟಿ.ರಮಾ ವೆಂಕಟರಮಣ, ಯಣ್ಣಿ ಚಂದ್ರಮೋಹನ್, ಡಿ.ವಿ.ಸುಬ್ಬಾರಾವ್, ಜಿ.ಬಿ.ಕೋಟೇಶ್ವರರಾವ್, ಗುರುಕೃಷ್ಣ ಧನಪಾಲ್, ಡಿ.ಶ್ರೀಧರಶ್ರೇಷ್ಠಿ ಇತರರಿದ್ದರು.
Published on

ಕಂಪ್ಲಿ: ಇಲ್ಲಿನ ವಾಸವಿ ಕಲ್ಯಾಣಮಂಟಪದಲ್ಲಿ ವಾಸವಿ ಮಹಿಳಾ ಮಂಡಳಿಯಿಂದ ಲಕ್ಷ ಶಂಭುಲಿಂಗ ಮಹಾಯಜ್ಞ, 2ಕೋಟಿ ಪಂಚಾಕ್ಷರಿ ಮಂತ್ರ ಜಪ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿದವು.

ಮಂಡಳಿ ಅಧ್ಯಕ್ಷೆ ಟಿ.ರಮಾ ವೆಂಕಟರಮಣ ಮಾತನಾಡಿ, ಲೋಕ ಕಲ್ಯಾಣಾರ್ಥ, ಸಮೃದ್ಧ ಮಳೆ, ಬೆಳೆಗಾಗಿ ಸಂಕಲ್ಪಿಸಿ ಶ್ರಾವಣ ಅಧಿಕಮಾಸ ಪ್ರಯುಕ್ತ ಶಂಭುಲಿಂಗ ಮಹಾಯಜ್ಞ, 2 ಕೋಟಿ ಪಂಚಾಕ್ಷರಿಮಂತ್ರ ಜಪ, ಗಿರಿಜಾ ಕಲ್ಯಾಣ ಮಹೋತ್ಸವ ಜರುಗಿಸಲಾಗಿದೆ ಎಂದರು.

ನಗೇಶ್ವರದೇವರು ಸಹಿತ ಪರಿವಾರ ದೇವತೆಗಳ ಅಭಿಷೇಕ, ಅನ್ನಕಾಪರವೇಶ್ವರಿ ದೇವಿಗೆ ಪುಷ್ಪಾಲಂಕಾರ ಇತರ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ರಾಜೇಂದ್ರಾಚಾರ್ ಬುದ್ದೀನ್ ಪೌರೋಹಿತ್ಯದಲ್ಲಿ ಜರುಗಿದವು.

ಧರ್ಮಕರ್ತ ಯಣ್ಣಿ ಚಂದ್ರಮೋಹನ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಡಿ.ವಿ.ಸುಬ್ಬಾರಾವ್, ವಾಸವಿ ಕಲ್ಯಾಣಮಂಟಪದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಬಿ.ಕೋಟೇಶ್ವರರಾವ್, ವಾಸವಿ ಯುವಜನ ಸಂಘದ ಅಧ್ಯಕ್ಷ ಗುರುಕೃಷ್ಣ ಧನಪಾಲ್, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಶ್ರೀಧರಶ್ರೇಷ್ಠಿ, ವಾಸವಿ ಮಹಿಳಾ ಮಂಡಳಿಯವರು ಹಾಗೂ ಆರ್ಯವೈಶ್ಯ ಸಮಾಜದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net