More

    ಕಿಲ್ಲನಕೇರಾದಲ್ಲಿ ಮಳೆಗಾಗಿ ಮಕ್ಕಳಿಂದ ವಿಶಿಷ್ಟ ಪ್ರಾರ್ಥನೆ

    ಯಾದಗಿರಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ಕೈಕೊಟ್ಟಿದ್ದು, ಅನ್ನದಾತ ಸಂಕಷ್ಟದಲ್ಲಿದ್ದಾನೆ. ಮಳೆಗಾಗಿ ಗ್ರಾಮೀಣ ಭಾಗದಲ್ಲಿ ಗ್ರಾಮ ದೇವತೆಗೆ ಪ್ರಾರ್ಥನೆ, ಭಜನೆಗಳ ಮೂಲಕ ದೇವರಿಗೆ ಮೊರೆ ಹೋಗುತ್ತಿದ್ದು, ಇಲ್ಲೊಂದು ಗ್ರಾಮದಲ್ಲಿ ಚಿಣ್ಣರು ಮಳೆಗಾಗಿ ವಿಶೇಷ ಕಾರ್ಯಕ್ರಮ ಮಾಡಿದ್ದಾರೆ.

    ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಭಾನುವಾರ ಮಕ್ಕಳು ಮಳೆಗಾಗಿ ಪ್ರಾಥರ್ಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿದ್ದಾರೆ. ಗ್ರಾಮದ ಕೆರೆಯಲ್ಲಿ ಗಂಟೆಗಟ್ಟಲೇ ಕಹರ ಸಾಹಸ ಪಟ್ಟು ಕಪ್ಪೆಗಳನ್ನು ಹಿಡಿದು ದೇವಸ್ಥಾನದ ಮುಂದೆ ಜೋಡಿ ಕಪ್ಪೆಗಳಿಗೆ ಕಂಕಣ ಭಾಗ್ಯ ಕಲ್ಪಿಸಿದ್ದಾರೆ.

    ನಂತರ ಇಡೀ ಊರಿನ ಬಡಾವಣೆಗಳಲ್ಲಿ ಕಪ್ಪೆ ದಂಪತಿಗೆ ಬೇವಿನ ತಪ್ಪಲು ಕಟ್ಟಿ ಮೆರವಣಿಗೆ ಮಾಡಿ, ಉಯ್ಯೋಉಯ್ಯೋ ಮಳೆರಾಯ,ದೋಣಿ ನೀರು ತಾರಯ್ಯ, ಬಣ್ಣ ಕೊಡ್ತೀನಿ ಬಾರಯ್ಯ. ಸುಣ್ಣ ಕೊಡ್ತೀನಿ ಮಳೆ ಸುರಿಯೋ ಮಳೆರಾಯ ಎಂದು ಬೇಡಿಕೊಂಡರು. ಇಡೀ ಗ್ರಾಮದಲ್ಲಿ ಮಕ್ಕಳ ಈ ವಿಶಿಷ್ಟ ಪ್ರಾರ್ಥನೆ ಕಂಡು ಬೆರಗಾಗಿದ್ದಾರೆ. ಮಳೆ ಮುನಿಸಿಕೊಂಡಾದ ಗ್ರಾಮೀಣ ಭಾಗದಲ್ಲಿ ಇಂಥ ಪದ್ಧತಿಗಳು ಆಗಾಗ ನಡೆಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ.

    ಗ್ರಾಮಸ್ಥರಾದ ಬಸಲಿಂಗಪ್ಪ ಹೊನ್ನಪ್ಪನ್ನೋರ್, ದೊಡ್ಡ ಚಿದಾನಂದ, ಶರಣಪ್ಪ ಆಶಪ್ಪನ್ನೋರ್, ಹಣಮಂತ ಹೊನ್ನಪ್ಪನ್ನೋರ್,ನಿಂಗಪ್ಪ, ಗುಂಜಲಪ್ಪ, ಹಾಗೂ ಮಕ್ಕಳಾದ ವಿನೋದ್, ಬಸವರಾಜ, ಅರುಣಕುಮಾರ, ಮಹೇಶ, ಧರ್ಮರಾಜ, ಗಜೇಂದ್ರ, ಆಂಜನೇಯ ಇತರರು ಸಾಥ್ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts