ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಬಿ.ಸುಶ್ಮಾ ಪ್ರಥಮ

Untitled design-5
ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು ಚಿತ್ರ ಪ್ರದರ್ಶಿಸಿದರು.
Published on

ಕಂಪ್ಲಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಸಮಿತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಗುರುವಾರ ತಾಲೂಕು ಮಟ್ಟದ ನಾನಾ ಸ್ಪರ್ಧೆಗಳು ನಡೆದವು.

ಚುನಾವಣಾ ಸಾಕ್ಷರತ ಕ್ಲಬ್ ಸಂಚಾಲಕಿ ರಾಜ್ಮಾ ಟಇ.ಎಂ.ಆರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಚುನಾವಣೆ ಸಾಕ್ಷರತೆ ಮೂಡಿಸಲು ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿದ್ದು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ ವಿಜೇತ ವಿದ್ಯಾರ್ಥಿ ಬಳ್ಳಾರಿಯ ಎಸ್.ಎಸ್.ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜು(ಸ್ವಾಯತ್ತ)ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಅಂತರ್ ಕಾಲೇಜುಗಳ ಸ್ಪರ್ಧೆಗಳಿಗೆ ಕಳುಹಿಸಲಾಗುವುದು ಎಂದರು.

ವಿಜೇತರು: ಪ್ರಬಂಧ(ಕನ್ನಡ)ಸ್ಪರ್ಧೆಯಲ್ಲಿ ಬಿ.ಸುಶ್ಮಾ(ಪ್ರಥಮ), ಎ.ಅಜಯ್(ದ್ವಿತೀಯ), ಟಿ.ಚಂದನಾ(ತೃತೀಯ), ಪ್ರಬಂಧ(ಆಂಗ್ಲ)ಸ್ಪರ್ಧೆಯಲ್ಲಿ ಕೆ.ಎಂ.ಕಾಂಚನಾ(ಪ್ರಥಮ), ಜಿ.ಅನುಷಾಸಿಂಗ್(ದ್ವಿತೀಯ), ಎಚ್.ಶ್ರಾವಣ್ಯ(ತೃತೀಯ), ಚಿತ್ರಕಲೆ ಸ್ಪರ್ಧೆಯಲ್ಲಿ ಆಫ್ರೀನ್ ಸುಲ್ತಾನ್(ಪ್ರಥಮ), ಎ.ತುಳಸಿ(ದ್ವಿತೀಯ), ಬಿ.ಶಿವರಾಜ(ತೃತೀಯ), ರಸಪ್ರಶ್ನೆಯಲ್ಲಿ ಸಿ.ಗಂಗಾ, ಉಮಾ, ವಿ.ಶಾಂತಿ, ಶಿವ(ಪ್ರಥಮ), ರಾಥೋಡ್ ರಾಘು, ಅಜಯ್, ಕೆ.ಎಂ.ಕಾಂಚನಾ, ಟಿ.ಚಂದನಾ(ದ್ವಿತೀಯ), ಬಿ.ಶಿವರಾಜ, ಎಸ್.ಗಿರಿ, ಡಿ.ಶಿವಮ್ಮ,ಕೆ.ಪಲ್ಲವಿ(ತೃತೀಯ)ಸ್ಥಾನಗಳಿಸಿದರು. ಪ್ರಾಚಾರ್ಯ ಡಾ.ಬಿ.ಶ್ರೀನಿವಾಸರೆಡ್ಡಿ ಸೇರಿ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net