ಒಡ್ಡಗಟ್ಟು ವಿತರಣಾ ನಾಲೆಯ ಗೋಡೆ ಎತ್ತರಿಸಿ

kampli canal
ದೇವಲಾಪುರದ ಗ್ರಾಮದ ಬಳಿ ಹರಿಯುವ ಒಡ್ಡಗಟ್ಟು ವಿತರಣಾ ನಾಲೆ.
Published on

ಕಂಪ್ಲಿ: ದೇವಲಾಪುರ ಗ್ರಾಮದ ಬಳಿ ಹಾದು ಹೋಗಿರುವ ಒಡ್ಡಗಟ್ಟು ವಿತರಣಾ ನಾಲೆಯ ಎರಡು ಬದಿ ತಡೆಗೋಡೆಗಳ ಎತ್ತರಿಸಿ ಅಭಿವೃದ್ಧಿಪಡಿಸಬೇಕು ಎಂದು ಕಾಲುವೆ ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ.

ಸುತ್ತಲಿನ ಬೆಟ್ಟ, ಗುಡ್ಡಗಳ ಪರಿಸರದಲ್ಲಿ ಬಿದ್ದ ಮಳೆ ನೀರು ಸೇರಿದಂತೆ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಯ ಸೋರಿಕೆ ನೀರು ನಾಲೆ ಮೂಲಕ ಹರಿಯುತ್ತದೆ. ಈ ನಾಲೆ ಉಡುವಿನ ಹಳ್ಳದವರೆಗೆ ಸಾಗುತ್ತಿದ್ದು, 300 ಎಕರೆ ಕೃಷಿ ಭೂಮಿಗೆ ನೀರೊದಗಿಸುತ್ತದೆ. ನಾಲೆಗೆ ನಿರ್ಮಿಸಿದ ತಡೆಗೋಡೆ ಚಿಕ್ಕದಿರುವುದರಿಂದ ನೀರು ಪೋಲಾಗುತ್ತದೆ. ಪಕ್ಕದ ಗದ್ದೆಗಳಿಗೆ ಹರಿದು ನೀರಿನ ಆರ್ದ್ರತೆ ಹೆಚ್ಚಾಗಿ ಯಾವುದೇ ಬೆಳೆ ನಾಟಿ ಮಾಡಲು ಕಷ್ಟವಾಗುತ್ತದೆ.

ನೀರು ಗದ್ದೆಗೆ ನುಗ್ಗುವುದರಿಂದ ನಾಟಿ ಮಾಡಿದ ಸಸಿ, ಪೈರು ನೀರಿನ ಹೊಡೆತಕ್ಕೆ ಕೊಚ್ಚಿ ಹೋಗುತ್ತವೆ. ನೀರು ಪೋಲಾಗುವುದರಿಂದ ಕಡೆಅಂಚಿನ ಭೂಮಿಗೆ ನೀರೊದಗುತ್ತಿಲ್ಲ. ಒಂದೂವರೆ ಅಡಿಯಷ್ಟು ತಡೆಗೋಡೆಗಳನ್ನು ಎತ್ತರಿಸಬೇಕು ಎಂದು ರೈತರಾದ ಗೌಡ್ರು ಅಂಜಿನಪ್ಪ, ಗೊರವರ ಹೊನ್ನೂರಪ್ಪ, ನಾಯಕರ ಲಕ್ಷ್ಮಪ್ಪ, ಕುರುಬರ ಕರಿಬಸಪ್ಪ, ಗೌಡ್ರು ನೀಲಪ್ಪ ಇತರರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಳ್ಳಾರಿಯ ಸಣ್ಣ ನೀರಾವರಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ದೊರಕಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net